ಶಾಸಕ ರೋಹಿತ್ ಪವಾರ್ ಆಪ್ತ ಸಹಾಯಕನ 12 ವರ್ಷದ ಮಗಳು ಶವವಾಗಿ ಪತ್ತೆ; ತನಿಖೆ ಆರಂಭ | found dead

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಬೈ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಅವರ ಆಪ್ತ ಸಹಾಯಕನ 12 ವರ್ಷದ ಮಗಳ ಶವ(found dead) ಅನುಮಾನಾಸ್ಪದ ರೀತಿಯಲ್ಲಿ ಭಾನುವಾರ(ಆ. 23) ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ರೋಹಿತ್ ಪವಾರ್ ಅವರ ಪಿಎ ಅಜಿತ್ ದಶಾವತಾರೆ ಅವರ ಪುತ್ರಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಬಾರಾಮತಿ ತೆಹಸಿಲ್‌ನ ರುಯಿ ಗ್ರಾಮದ ಸಾಯಿನಗರ ಪ್ರದೇಶದ ಆಕೆಯ ನಿವಾಸದ ಬಳಿ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಶನಿವಾರ ಕೋಪದಿಂದ ಮನೆಯಿಂದ ಹೊರಡುವ ಮೊದಲು ಬಾಲಕಿ ತನ್ನ ತಾಯಿಯೊಂದಿಗೆ ಒಂದು ವಿಷಯದ ಬಗ್ಗೆ ಸಣ್ಣಪುಟ್ಟ ಜಗಳವಾಡಿದ್ದಳು. ಆದರೆ ಆಕೆ ಹಿಂತಿರುಗದಿದ್ದಾಗ, ಆಕೆಯ ಕುಟುಂಬವು ಇಂದು ಬೆಳಗ್ಗೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ. ಬಳಿಕ ಮನೆಯ ಬಳಿ ಆಕೆಯ ಶವ ಪತ್ತೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಬಾರಾಮತಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಬಾಲಕಿಯ ಸಾವಿಗೆ ಕಾರಣ ಏನೆಂಬುದನ್ನು ಪರಿಶೀಲಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net