

ಪ್ರಮುಖ ಮುಖ್ಯಾಂಶಗಳು
ಮುಂಬೈ: ಹುಟ್ಟು ಹಬ್ಬ ಎಂದರೆ ಅದೊಂದು ಸಂಭ್ರಮ, ಹೊಸ ಬಟ್ಟೆ ಖರೀದಿ, ದೇವಸ್ಥಾನಕ್ಕೆ ಭೇಟಿ, ದಿನಪೂರ್ತಿ ಗೆಳೆಯ ಮತ್ತು ಗೆಳೆತಿಯರಿಂದ ಕೇಳಿ ಬರುವ ಶುಭಾಷಯಕ್ಕೆ ಉತ್ತರಿಸುವುದು. ಕೊನೆಗೇ ಕೇಕ್ ಕತ್ತರಿಸುವುದು ಎಲ್ಲವೂ ಒಂದು ಸಡಗರ ಸಂಭ್ರಮ. ಆದರೆ..ಇಂತಹ ಸಂತೋಷದ ಸಮಯವು ವಿಷಕಾರಿಯಾಗಿ ಬದಲಾಗಿಬಿಟ್ಟರೆ ಎಂತಹ ಅಘಾತ ಅಲ್ಲವೇ. ಹೌದು, ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹಲ್ಲಿ ಸತ್ತಿದ್ದ ಕೇಕ್ ಸೇವಿಸಿ, 11 ಜನರು ಆಸ್ಪತ್ರೆ ಪಾಲಾದ ಘಟನೆ ಬೆಳಕಿಗೆ ಬಂದಿದೆ.
ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಸ
ರ್ಕಾರದ ಕಾನೂನು ಕ್ರಮ, ಹಾಗೂ ಆಹಾರ ಸುರಕ್ಷತೆಯ ಬಗ್ಗೆ ಅಂಗಡಿ, ಹೋಟೆಲ್, ಬೇಕರಿ ಮಾಲೀಕರಿಗೆ ಎಷ್ಟು ಗೌರವವಿದೆ ಎನ್ನುವುದು ಕಾಡುತ್ತಿರುವ ಕಳವಳವಾಗಿದೆ.