ಹೋಗಿದ್ದು 10,000! ಬಂದಿದ್ದು 3.28 ಲಕ್ಷ ರೂ.; 9 ವರ್ಷಗಳ ಹೋರಾಟಕ್ಕೆ ಕಡೆಗೂ ಸಿಕ್ಕಿತು ಫಲ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 5 ದಿನದಲ್ಲೇ ತಪ್ಪು ತಿದ್ದಿಕೊಳ್ಳದ ಬ್ಯಾಂಕ್​ಗೆ ಬಿತ್ತು ಭಾರಿ ದಂಡ
  • 10 ಸಾವಿರ ರೂ. ಡೆಬಿಟ್ ಆಗಿದೆ ಎಂದರೂ ಗ್ರಾಹನಿಗೆ ಕೊಡಲಿಲ್ಲ ಕಟ್​ ಆದ ಹಣ
  • 9 ವರ್ಷಗಳ ಸತತ ಹೋರಾಟಕ್ಕೆ ಕಡೆಗೂ ನ್ಯಾಯಾಲಯದಲ್ಲಿ ಸಿಕ್ಕಿತು ಫಲ
ಸೂರತ್​: 9 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಎಸ್​ಬಿಐ ಬ್ಯಾಂಕ್​ನ ಎಟಿಎಂನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ತಮ್ಮ 10 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಎಷ್ಟೇ ಬಾರಿ ಹಣ ವಾಪಾಸ್​ ಮಾಡುವಂತೆ ಮನವಿ ಮಾಡಿಕೊಂಡರು ಬುದ್ಧಿ ಕಲಿಯದ ಬ್ಯಾಂಕ್​, ಕಡೆಗೂ 9 ವರ್ಷಗಳ ಬಳಿಕ ಗ್ರಾಹಕರ ನ್ಯಾಯಾಲಯದ ಆದೇಶದ ಮೇರೆಗೆ 10,000 ಜೊತೆಗೆ ದುಪ್ಪಟ್ಟು ಪರಿಹಾರ ಕೊಟ್ಟ ಘಟನೆ ಗುಜರಾತ್​ನ ಸೂರತ್​ನಲ್ಲಿ ವರದಿಯಾಗಿದೆ.
ಆರ್​ಬಿಐನ ನಿಯಮದ ಪ್ರಕಾರ, ಬ್ಯಾಂಕ್​ನಿಂದ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಗ್ರಾಹಕನಿಗೆ ಸಿಕ್ಕ ನಂತರವೂ ಎಟಿಎಂನಿಂದ ಹಣ ಬಾರದಿದ್ದರೆ, ಆಯಾ ಬ್ಯಾಂಕ್ ತನ್ನ​ ಗ್ರಾಹಕನಿಗೆ ಐದು ದಿನಗಳಲ್ಲಿ ಹಣವನ್ನು ಮರುಪಾವತಿ ಮಾಡಬೇಕು. ಆದರೆ, ಬ್ಯಾಂಕ್​ ಆಫ್​ ಬರೋಡ ಇದಕ್ಕೆ ತೆಗೆದುಕೊಂಡಿದ್ದು ಬರೋಬ್ಬರಿ 9 ವರ್ಷ ಅನ್ನೋದೇ ಅಚ್ಚರಿ. ತನ್ನ ತಪ್ಪನ್ನು ಸರಿಪಡಿಸಿಕೊಳ್ಳದೆ, ಗ್ರಾಹಕನಿಗೆ ಹಣ ಹಿಂತಿರುಗಿಸಲು ಸತಾಯಿಸಿದ ಬ್ಯಾಂಕ್​, ಈಗ ಲಕ್ಷಗಟ್ಟಲೇ ಹಣವನ್ನು ಪರಿಹಾರವಾಗಿ ನೀಡುವ ಪರಿಸ್ಥಿತಿಗೆ ತಲುಪಿದ್ದು ನಿಜಕ್ಕೂ ದುರಂತವೇ ಸರಿ.

ಏನಿದು ಘಟನೆ?

2017 ಫೆ.18ರಂದು ಸೂರತನ್​​ ಉಧ್ನಾ ಪ್ರದೇಶದ ಗ್ರಾಹಕರೊಬ್ಬರು, ಸ್ಥಳೀಯ ಎಸ್​ಬಿಐ ಎಟಿಎಂನಿಂದ 10 ಸಾವಿರ ರೂ. ಹಣವನ್ನು ಡ್ರಾ ಮಾಡಲು ಯತ್ನಿಸಿದರು. ಡಬಿಟ್​ ಕಾರ್ಡ್​ ಹಾಕಿ ತಮ್ಮ ಎಟಿಎಂ​ ಪಿನ್​ ಕೊಟ್ಟು ಹಣಕ್ಕಾಗಿ ಕೆಲ ನಿಮಿಷ ಕಾದರು. ಆದರೆ,  ದುರಾದೃಷ್ಟವಶಾತ್​ ಅವರಿಗೆ ದುಡ್ಡು ಬರಲಿಲ್ಲ. ಜೊತೆಗೆ ಇಷ್ಟು ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಸಿಗುವ ರಶೀದಿಯೂ ಸಿಕ್ಕಿಲ್ಲ.

ಕ್ಯಾರೇ ಎನ್ನದ ಬ್ಯಾಂಕ್​

ಕೆಲವು ನಿಮಿಷದ ನಂತರ ಗ್ರಾಹಕರ ಮೊಬೈಲ್​ಗೆ, ಬ್ಯಾಂಕ್​ ಆಫ್ ಬರೋಡದಿಂದ ನಿಮ್ಮ ಖಾತೆಯಿಂದ ಹತ್ತು ಸಾವಿರ ರೂ. ಡೆಬಿಟ್ ಆಗಿದೆ ಎಂಬ ಸಂದೇಶ ಬಂದಿತ್ತು. ಇದರಿಂದ ತೀವ್ರ ಗಾಬರಿಗೊಂಡ ವ್ಯಕ್ತಿ, ಹಣ ವಾಪಾಸ್​ ಆಗುತ್ತೆ ಎಂದು ಎರಡು ದಿನಗಳ ಕಾಲ ಬೇಸರದಲ್ಲಿದ್ದರು. ಕಡೆಗೆ, ಫೆ.21ರಂದು ದುಂಭಾಲ್​ನಲ್ಲಿರುವ ಬ್ಯಾಂಕ್​ ಆಫ್ ಬರೋಡ ಶಾಖೆಗೆ ದೂರು ನೀಡಿದರು. 2017ರ ಮಾರ್ಚ್​ನಿಂದ ಸತತವಾಗಿ ದೂರಿನ ಮೇಲೆ ದೂರು, ಇ-ಮೇಲ್​ಗಳು, ಪತ್ರ ಕಳುಹಿಸಿದರು. ಆದರೆ, ಬ್ಯಾಂಕಿನಿಂದ ಮಾತ್ರ ಒಂದೇ ಒಂದು ಪ್ರತಿಕ್ರಿಯೆ ಬರಲಿಲ್ಲ. 
ಬ್ಯಾಂಕಿನವರ ಈ ನಡೆಯಿಂದ ತೀವ್ರ ಕುಪಿತಗೊಂಡ ವ್ಯಕ್ತಿ, ಆರ್​ಬಿಐ ಅಧಿಕಾರಿಗಳ ಜೊತೆ ಮಾತನಾಡಿ, ಸಿಸಿಟಿವಿ ದೃಶ್ಯಾವಳಿಗಳನ್ನು  ಪಡೆಯಲು ಎಸ್​ಬಿಐನ ಆರ್​​ಟಿಐಗೆ ಮನವಿ ಸಲ್ಲಿಸಿದರು. ಅದಾದ ಬಳಿಕ 2017ರ ಡಿ.20ರಂದು ಗ್ರಾಹಕ ನ್ಯಾಯಾಲಯಕ್ಕೆ ತಮ್ಮ ದೂರಿನ ಅರ್ಜಿ ಸಲ್ಲಿಸಿದರು. 

ಕೋರ್ಟ್​ನಲ್ಲಿ ಆಗಿದ್ದೇನು?

ಗ್ರಾಹಕರ ನ್ಯಾಯಾಲಯದ ನೋಟಿಸ್​ಗೆ ಪ್ರತಿಕ್ರಿಯಿಸಿದ ಬ್ಯಾಂಕ್​ ಆಫ್​ ಬರೋಡ ಹೇಳಿದ್ದಿಷ್ಟು. "ಗ್ರಾಹಕ ಹಣ ಡ್ರಾ ಮಾಡಿದ್ದು ಎಸ್​ಬಿಐ ಎಟಿಎಂನಲ್ಲಿ. ನಮ್ಮ ದಾಖಲೆಯ ಪ್ರಕಾರ, ಅವರ ಹಣ ಯಶಸ್ವಿಯಾಗಿ ಡೆಬಿಟ್ ಆಗಿದೆ. ಹೀಗಾಗಿ, ಬ್ಯಾಂಕ್​ ಇದರ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ" ಎಂದು ವಾದಿಸಿತು.
ಈ ವಾದವನ್ನು ತಳ್ಳಿಹಾಕಿದ ಗ್ರಾಹಕ ನ್ಯಾಯಾಲಯ, "ಆರ್​ಬಿಐನ ನಿಯಮದ ಪ್ರಕಾರ, ಗ್ರಾಹಕನ ಹಣ ಡೆಬಿಟ್ ಆಗಿದೆ ಎಂದು ಸಂದೇಶ ಸಿಕ್ಕಿಯೂ ಹಣ ಖಾತೆದಾರನಿಗೆ ಪಾವತಿಯಾಗಿಲ್ಲ ಅಂದಮೇಲೆ ಈ ತಪ್ಪನ್ನು ತಿದ್ದಿಕೊಳ್ಳಲು ನಿಮಗೆ ಐದು ದಿನ ಕಾಲಾವಕಾಶವಿತ್ತು. ಆದರೆ, ನೀವು ಹಣ ಮರುಪಾವತಿ ಮಾಡಲಿಲ್ಲ. ನೀವು ಆರ್​ಬಿಐನ​ ನಿಯಮ ಉಲ್ಲಂಘನೆ" ಎಂದು ಹೇಳಿ 3.28 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net