ಚಾಟ್ಸ್: ಭೇಲ್ ಪುರಿ, ಸೆವ್ ಪುರಿ, ದಹಿ ಪುರಿ ಮತ್ತು ಮೊಳಕೆ ಬರಿಸಿದ ಕಾಳುಗಳ ಚಾಟ್ ತಯಾರಿಸಲು ಗ್ಯಾಸ್ ಅಗತ್ಯವಿಲ್ಲ, ಕೇವಲ ಕಟ್ ಮಾಡಿದ ತರಕಾರಿ, ಮೊಸರು, ಖಾರ ಮತ್ತು ಸಿಹಿ ಚಟ್ನಿಗಳನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಸಿದ್ಧಪಡಿಸಬಹುದು. ಇವು ಕೇವಲ ರುಚಿಕರವಷ್ಟೇ ಅಲ್ಲ, ನಾರು ಮತ್ತು ಪ್ರೊಟೀನ್‌ನಿಂದ ಸಮೃದ್ಧವಾಗಿವೆ. ಇವು ಇಂಧನ ಉಳಿತಾಯದ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತವೆ.