'ನಿಮಗೆ ನಿಜವಾಗಿಯೂ ದಮ್ಮು, ತಾಕತ್ತಿದ್ದರೆ ಫಾಲ್ಟಾದಲ್ಲಿ ಸ್ಪರ್ಧಿಸಿ ಗೆಲ್ಲಿ'; ಬಿಜೆಪಿಗೆ ಸವಾಲೆಸೆದ ಟಿಎಂಸಿ ನಾಯಕ Abhishek Banerjee

Abhishek Banerjee
Abhishek Banerjee
Published on

ಪ್ರಮುಖ ಮುಖ್ಯಾಂಶಗಳು

  • ಹತ್ತು ಜನ್ಮ ಎತ್ತಿ ಬಂದರೂ ಫಾಲ್ಟಾದಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ.
  • ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಇವಿಎಂಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪ.
  • ಫಾಲ್ಟಾದಲ್ಲಿ ತೃಣಮೂಲ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆ.
ಕೋಲ್ಕತ್ತಾ:
ಡೈಮಂಡ್ ಹಾರ್ಬರ್ ಮಾದರಿ ಕುಸಿಯುತ್ತಿದೆ ಎಂದ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರ ಟ್ವೀಟ್​ ಉಲ್ಲೇಖಿಸಿ, ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕಿಡಿಕಾರಿದ್ದಾರೆ. ತಾಕತ್ತಿದ್ದರೆ ತಮ್ಮ ಭದ್ರಕೋಟೆಯಾದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲು ಸವಾಲೆಸೆದಿದ್ದಾರೆ.

ಏಪ್ರಿಲ್​ 29ರಂದು ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಫಾಲ್ಟಾ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ಚುನಾವಣಾ ಆಯೋಗವು 285 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ದಿನಾಂಕ ಫಿಕ್ಸ್​ ಮಾಡಿದೆ.

ಫಾಲ್ಟಾ ವಿದಾನಸಭಾ ಕ್ಷೇತ್ರದ ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳಲ್ಲಿ ಅಕ್ರಮದ ಬಗ್ಗೆ ಆರೋಪ ಕೇಳಿ ಬಂದಿರುವ ಹಿನ್ನೆಲೆ ಇದೇ ಮೇ.21ರಂದು ಮರು ಮತದಾನ ನಡೆಯಲಿದ್ದು, ಮೇ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎನ್ನಲಾಗಿದೆ.

ಅಭಿಷೇಕ್ ಬ್ಯಾನರ್ಜಿ ಹೇಳಿದ್ದೇನು?

'ನಿಮ್ಮ ಬಾಂಗ್ಲಾ ವಿರೋಧಿ ಮತ್ತು ಗುಜರಾತಿ ಗ್ಯಾಂಗ್​​ ಅವರ ಕೈಗೊಂಬೆಯಾದ ಜ್ಞಾನೇಶ್ ಕುಮಾರ್‌ ಯಾರೇ ಬಂದರೂ 'ನನ್ನ ಡೈಮಂಡ್​ ಹಾರ್ಬರ್​ ಮಾದರಿಗೆಕನಿಷ್ಠ ಒಂದು ಸಣ್ಣ ಹಾನಿ ಮಾಡಲು ಸಾಧ್ಯವಿಲ್ಲ, ಹತ್ತು ಜನ್ಮ ಎದ್ದು ಬಂದರೂ ನನ್ನನ್ನು ಮತ್ತು ಟಿಎಂಸಿಯನ್ನು ಸೋಲಿಸೋಕೆ ಸಾಧ್ಯವಿಲ್ಲ'.


'ನಿಮ್ಮ ಬಳಿ ಏನೆಲ್ಲಾ ಶಕ್ತಿ ಇದೆಯೋ ಅಷ್ಟನ್ನೂ ಬಳಸಿ ನೋಡಿ. ಇಡೀ ಕೇಂದ್ರ ಸರ್ಕಾರಕ್ಕೇ ನಾನು ಸವಾಲು ಹಾಕುತ್ತಿದ್ದೇನೆ. ಫಾಲ್ಟಾಕ್ಕೆ ಬನ್ನಿ. ನಿಮ್ಮಲ್ಲಿ ಯಾರು ಅತ್ಯಂತ ಶಕ್ತಿಶಾಲಿಯೋ ಅವರನ್ನು ಕಳುಹಿಸಿ, ಬೇಕಿದ್ದರೆ ದೆಹಲಿಯ ಗಾಡ್‌ಫಾದರ್‌ಗಳಲ್ಲಿ ಒಬ್ಬರನ್ನೇ ಕಳುಹಿಸಿ. ನಿಮಗೆ ನಿಜವಾಗಿಯೂ ದಮ್ಮಿದ್ದರೆ, ಫಾಲ್ಟಾದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ' ಎಂದು ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಕಿಡಿ

ಚುನಾವಣೆ ವೇಳೆ ಬಿಜೆಪಿ ಇವಿಎಂಗಳನನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಸರಿಯಾದ ಕ್ರಮದಲ್ಲಿ ಮತದಾನ ನಡೆದರೆ, ಬಿಜೆಪಿ ನೆಲಕಚ್ಚಲಿದೆ. ಸಿಬಿಐ ಮತ್ತು ಇಡಿ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ನಡೆಸು ತನಿಖಾ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಏನಿದು ಡೈಮಂಡ್​ ಹಾರ್ಬರ್?

ಡೈಮಂಡ್​ ಹಾರ್ಬರ್​ ಮಾಡೆಲ್​ ಎನ್ನುವುದು ಅಭಿಷೇಕ್​ ಬ್ಯಾನರ್ಜಿ ಅವರರು ತಮ್ಮ ಕ್ಷೇತ್ರದಲ್ಲಿ ತಂದ ಆಧುನಿಕ ಅಭಿವೃದ್ಧಿಗೆ, ಆಡಳಿತದ ರೀತಿಗೆ ಹೀಗೆಂದು ಕರೆಯಲಾಗುತ್ತದೆ. ಟಿಎಂಸಿಗೆ ಇದು ಶ್ರೀರಕ್ಷೆ. ಕೋವಿಡ್​ ಕಾಲದಲ್ಲಿ ಆರೋಗ್ಯ ತಪಾಸಣೆ, ಆರೋಗ್ಯ ಯೋಜನೆಗಳ ಅನುಷ್ಠಾನ ಸೇರಿದಂತೆ ಹಲವು ಅಭಿವೃದ್ಧಿಯನ್ನು ತಂದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net