ಹೌಜ್ ರಾಣಿಯ ಕಿರಿದಾದ ಲೇನ್‌ಗಳಲ್ಲಿ ನೆಲೆಗೊಂಡಿರುವ ಲೆಮನ್ ಗ್ರೀನ್ ರೆಸ್ಟೋರೆಂಟ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ನಿಧಾನವಾಗಿ ಸುತ್ತೆಲ್ಲ ಅಗ್ನಿ ಆವರಿಸುತ್ತಿರುವುದನ್ನು ಕಂಡುಕೊಂಡ ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟದಿಂದ ನೆಲಕ್ಕೆ ಹಾರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿದೇಶಿ ಪ್ರಜೆಗಳು ತಂಗಿದ್ದರು
ಲೆಮನ್ ಗ್ರೀನ್ ರೆಸ್ಟೋರೆಂಟ್‌ನಲ್ಲಿ 25 ಕೊಠಡಿಗಳನ್ನು ಹೊಂದಿತ್ತು ಮತ್ತು ಸುಮಾರು 40 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು, ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ದೇಶಕ್ಕೆ ಪ್ರಯಾಣಿಸಿದ್ದ ವಿದೇಶಿ ಪ್ರಜೆಗಳು ಎನ್ನಲಾಗಿದೆ.
ಅಡುಗೆ ಭಟ್ಟ ಹೇಳಿದ್ದಿಷ್ಟು
ಬೆಳಿಗ್ಗೆ 8:00 ರ ಸುಮಾರಿಗೆ ವಿದ್ಯುತ್ ಒಲೆ ಆನ್ ಮಾಡಲು ಪ್ರಯತ್ನಿಸಿದಾಗ ಬೆಂಕಿ ಹಬ್ಬಿತು. ಆ ಬಗ್ಗೆ ನಾನು ಸಂಬಂಧಪಟ್ಟವರಿಗೆ ಮಾಹಿತಿ ಕೊಟ್ಟೆ. ನಾನು ಹೊರಗೆ ಬಂದು ನೋಡಿದಾಗ ಇಡೀ ಹೋಟೆಲ್ಗೆ ಬೆಕ್ಕಿ ಹೊತ್ತಿಕೊಂಡಿತ್ತು ಎಂದು ಅಡುಗೆ ಭಟ್ಟ ಕೇಸರ್ ಸಿಂಗ್ ಹೇಳಿದರು.