ಬರೇಲಿಯಲ್ಲಿ ರಕ್ಷಾ ಬಂಧನ ಸಂಭ್ರಮ; ಮೇಯರ್ ಪುತ್ರನಿಗೆ ರಾಖಿ ಕಟ್ಟಿ, ಉಡುಗೊರೆ ಪಡೆಯುವಾಗ ಕಾಲ್ತುಳಿತ, ಮಹಿಳೆ ಸಾವು

Bareilly woman dies in stampede
Bareilly woman dies in stampede
Published on

ಪ್ರಮುಖ ಮುಖ್ಯಾಂಶಗಳು

  • ಬರೇಲಿಯಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತ.
  • ಉಡುಗೊರೆ ಪಡೆಯಲು ಸೇರಿದ್ದ ಸಾವಿರಕ್ಕೂ ಹೆಚ್ಚು ಮಹಿಳೆಯರು, ನೂಕುನುಗ್ಗಲು.
  • ಕಾಲ್ತುಳಿತದಿಂದ ಮಹಿಳೆ ಸಾವು, ಮೂವರಿಗೆ ಗಾಯ.
Bareilly woman dies in stampede: ಉತ್ತರ ಪ್ರದೇಶದ ಬರೇಲಿ ಕ್ಲಬ್​ ಮೈದಾನದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ, ರಾಖಿ ಕಟ್ಟಿ ಉಚಿತ ಉಡುಗೊರೆ ಪಡೆಯಲು ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರು. ಜನದಟ್ಟಣೆ ಹೆಚ್ಚಾಗಿ ಕಾಲ್ತುಳಿತ ಉಂಟಾದ ಪರಿಣಾಮ, 45 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕಾರ್ಯಕ್ರಮವನ್ನು ಇಲ್ಲಿನ ಮೇಯರ್​​ ಉಮೇಶ್​ ಗೌತಮ್​ ಅವರ ಪುತ್ರ ಪಾರ್ಥ ಗೌತಮ್ ಆಯೋಜಿಸಿದ್ದರು ಎನ್ನಲಾಗಿದೆ.
ಮೃತರನ್ನು ಪಿಲಿಭಿತ್ ಬೈಪಾಸ್ ರಸ್ತೆಯ ಚಂದ್ರಗುಪ್ತ ಪುರಂನ ಮಾಜಿ ಸೈನಿಕ ಭಗವಾನ್ ಸಿಂಗ್ ಅವರ ಪತ್ನಿ ಮಧು ಎಂದು ಗುರುತಿಸಲಾಗಿದೆ, ಮೈದಾನದಲ್ಲಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ ಗಾಯಗೊಂಡರು.

 ಗಾಯಗಳಿಂದ ನರಳಾಡುತ್ತಿದ್ದ  ಅವರನ್ನು ರಕ್ಷಿಸಿ, ಬರೇಲಿ ಕ್ಲಬ್​ನಿಂದ  2 ಕಿ.ಮೀ.ದೂರವಿರುವ ಮತ್ತು ಮಿಷನ್ ಆಸ್ಪತ್ರೆಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಈ ಬಗ್ಗೆ  ವೈದ್ಯರು ಸ್ಪಷ್ಟನೆ ಕೊಟ್ಟರು ಎನ್ನಲಾಗಿದೆ.

ಮಧು ಅವರ ಸಹೋದರ ಅನೇಶ್ ಸಿಂಗ್, ತಮ್ಮ ಸಹೋದರಿ ನೆರೆಹೊರೆಯವರೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದರು. 

ಸಂತ್ರಸ್ತೆಯ ಸಂಬಂಧಿಕರೊಬ್ಬರು ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ ಬದುಕುಳಿದಿದ್ದು, ಭೀಕರ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮೂವರಿಗೆ ಗಾಯ

ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. 

20 ಸಾವಿರ ಜನರಿಗೆ ಮಾತ್ರ ಆಹ್ವಾನ ಪತ್ರ

ಈ ವರ್ಷ ಒಟ್ಟು 20,000 ಮಹಿಳೆಯರಿಗೆ ಆಹ್ವಾನ ಪತ್ರಗಳನ್ನು ಆಯೋಜಕರು ಕೊಟ್ಟಿದ್ದರು.

ಮೇಯರ್ ಮತ್ತು ಅವರ ಮಗನಿಗೆ ರಾಖಿ ಕಟ್ಟಲು ಸುತ್ತಮುತ್ತಲಿನ ತಾಲೂಕುಗಳಿಂದ ಮಹಿಳೆಯರು ಬಂದಿದ್ದರು. 

ಯಾವುದೇ ಅಹಿತಕರ ಘಟನೆಗಳಿಲ್ಲದೆ ಕೆಲ ಕಾಲ ನಡೆಯಿತು. 

ಮಕ್ಕಳು, ಪತಿಯರೊಂದಿಗೆ ಬಂದ ಮಹಿಳೆಯರು

ಮೈದಾನದಲ್ಲಿ ಸೇರಿದ್ದ ಜನರು ನೂಕುನುಗ್ಗಲಿಗೆ ಯತ್ನಿಸುತ್ತಿರುವಾಗಲೇ..ತಾಳ್ಮೆಯಿಂದ ಕಾಯಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಜನರ ಸಂಖ್ಯೆ ಹೆಚ್ಚಾಗಿದ್ದರಿಂದ ಜನಸಂದಣಿ  ನಿಯಂತ್ರಿಸಲು ಸಾಧ್ಯವಾಗದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. 

ಮಧು ಅವರ ಸಹೋದರ ಅನೇಶ್ ಸಿಂಗ್, ತಮ್ಮ ಸಹೋದರಿ ನೆರೆಹೊರೆಯ ಹಲವಾರು ಮಹಿಳೆಯರೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net