

ಬೆಂಗಳೂರು:ಗೋವಾದ ಕೆನಕೋನತಾಲೂಕಿನ ಪರ್ತಗಾಳಿ ಗ್ರಾಮದಲ್ಲಿರುವಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ)ಸಮಾಜದ ಜೀವೋತ್ಥಮಮಠದಲ್ಲಿ ದೇಶದಲ್ಲೇ ಬೃಹತ್ ಎಂದುಹೇಳಲಾಗುವ 77 ಅಡಿಶ್ರೀರಾಮನ ಕಂಚಿನ ಪ್ರತಿಮೆಯನ್ನುಸ್ಥಾಪಿಸಲಾಗಿದ್ದು,ಇದೇ ನ.28ರಂದುಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಮಾಡಲಿದ್ದಾರೆ ಎಂದು ಕಾರ್ಯಕ್ರಮಸಮಿತಿ ಧರ್ಮದರ್ಶಿ ಪ್ರದೀಪ್ ಪೈತಿಳಿಸಿದ್ದಾರೆ.
ಖಾಸಗಿಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಈ ಕುರಿತು ವಿವರ ನೀಡಿದಪೈ, ಶ್ರೀಸಂಸ್ಥಾನಗೋಕರ್ಣಪರ್ತಗಾಳಿ ಜೀವೋತ್ತಮಮಠದ ಸ್ಥಾಪನೆಯಾಗಿ 550ಸಂವತ್ಸರಗಳುಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶ್ರೀವಿದ್ಯಾದೀಶ ತೀರ್ಥ ಶ್ರೀಪಾದಸ್ವಾಮೀಜಿ ಸಂಕಲ್ಪದಂತೆ ನ.27ರಿಂದ 11ದಿನಗಳ ಕಾಲಸಾರ್ಧಾ ಪಂಚಶತಮಾನೋತ್ಸವ ವಿಶೇಷಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗುಜರಾತಿನವಡೋದರದಲ್ಲಿ ಸ್ಥಾಪನೆಯಾಗಿರುವಸರ್ದಾರ್ ವಲ್ಲಭಬಾಯ್ ಪಟೇಲ್ಪ್ರತಿಮೆ ಹಾಗೂ ಬೆಂಗಳೂರು ವಿಮಾನನಿಲ್ದಾಣದಲ್ಲಿ ಸ್ಥಾಪನೆಯಾಗಿರುವಕೆಂಪೇಗೌಡ ಪ್ರತಿಮೆ ನಿರ್ಮಿಸಿದಕಲಾವಿದರ ತಂಡವೇ ಶ್ರೀರಾಮನ 77ಅಡಿ ಕಂಚಿನಪ್ರತಿಮೆಯನ್ನು ನಿರ್ಮಾಣ ಮಾಡಿದೆ.
ಪರ್ತಗಾಳಿಯಸುಂದರ ಪರಿಸರದ ನಡುವೆ ಶ್ರೀರಾಮನಬೃಹತ್ ವಿಗ್ರಹದ ಜೊತೆಗೆ ಆಧುನಿಕಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗಿದ್ದು,ಇದರ ಮೂಲಕ ಗೋವಾಪ್ರವಾಸವೆಂದರೆ ಕೇವಲ ಮೋಜು ಮಸ್ತಿಎಂಬ ಅಭಿಪ್ರಾಯವನ್ನು ಬದಲಿಸಿಧಾರ್ಮಿಕ ಪ್ರವಾಸೋದ್ಯಮಕ್ಕೆಒತ್ತು ನೀಡುವ ಉದ್ದೇಶದಿಂದ ಈಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಪರ್ತಗಾಳಿಕ್ಷೇತ್ರವು ಮುಂದಿನ ದಿನಗಳಲ್ಲಿದಕ್ಷಿಣ ಅಯೋಧ್ಯೆಯಾಗಬೇಕೆಂಬಸಂಕಲ್ಪ ಶ್ರೀಗಳು ಮಾಡಿರುವುದಾಗಿವಿವರಿಸಿದರು.
ಸುದ್ದಿಗೋಷ್ಠಿಯಲ್ಲಿಜಿಎಸ್‌ಬಿ ಸಮುದಾಯದ ಮುಖಂಡರಾದಅಮರನಾಥ ಕಾಮತ್,ರವೀಂದ್ರ ಶಾನುಭಾಗ್,ಸದಾಶಿವ ಶೆಣೈಮತ್ತಿತರರು ಉಪಸ್ಥಿತರಿದ್ದರು.
ಮೂಲಮದ್ವಾಚಾರ್ಯ ಪರಂಪರೆಯ ಉಡುಪಿ ಪಲಿಮಾರು ಶ್ರೀಗಳಿಂದ ದೀಕ್ಷೆಪಡೆದ ಶ್ರೀನಾರಾಯಣ ತೀರ್ಥ ಶ್ರೀಪಾದರು1475ರಲ್ಲಿಸ್ಥಾಪಿಸಿದ ಪರ್ತಗಾಳಿ ಮಠಕ್ಕೆ550 ವರ್ಷಗಳುಪೂರ್ಣಗೊಂಡಿದ್ದು,550 ಕೋಟಿ ಶ್ರೀರಾಮನಾಮ ಜಪ ಮಾಡಲಾಗಿದೆ.
ಸುಮಾರು20ಲಕ್ಷಜಿಎಸ್‌ಬಿ ಸಮಾಜ ಬಂಧುಗಳಿರುವದೇಶದೆಲ್ಲೆಡೆ 120ಕೇಂದ್ರ ಮತ್ತು100 ಉಪಕೇಂದ್ರಗಳನ್ನುತೆರೆದು ಅಲ್ಲಿ ಪ್ರತಿನಿತ್ಯರಾಮನಾಮ ಜಪವನ್ನು ನಡೆಸಲಾಗಿದೆ.ಈಗಾಗಲೇ 550ಕೋಟಿ ಶ್ರೀರಾಮನಾಮಜಪ ಪೂರ್ಣಗೊಂಡಿದ್ದು ಅದರ ಸಮಾರೋಪನಡೆಯಲಿದೆ.
ಇದೇವೇಳೆ ಪರ್ತಗಾಳಿ ಮಠದ ಮೂಲ ಶ್ರೀನಾರಾಯಣತೀರ್ಥ ಶ್ರೀಪಾದರಿಗೆ ಉಪದೇಶವಾದಬದರಿಕಾಶ್ರಮದಿಂದ ಶ್ರೀರಾಮನದ್ವಿಗ್ವಿಜಯ ರಥಯಾತ್ರೆ ಆರಂಭಗೊಂಡಿದ್ದುದೇಶದ ವಿವಿಧೆಡೆ ಸಂಚರಿಸಿ ನ.27ರಹೊತ್ತಿಗೆ ಪರ್ತಗಾಳಿಗೆ ಆಗಮಿಸಲಿದ್ದು,ಯಾತ್ರೆಸಂಪನ್ನಗೊಳ್ಳಲಿದೆ.
11 ದಿನಗಳವಿಶೇಷ ಕಾರ್ಯಕ್ರಮ
ಸಾರ್ಧಾಪಂಚಶತಮಾನೋತ್ಸವದ ಅಂಗವಾಗಿ 10ದಿನಗಳ ಕಾಲದಿನಕ್ಕೆ 55 ರಂತೆ550 ರಾಮತಾರಕಹವನ ನಡೆಯಲಿದೆ.ಪಾರಾಯಣ ಯಜ್ಞ,ಜ್ಞಾನ ಯಜ್ಞಸೇರಿದಂತೆ ವಿವಿಧ ಧಾರ್ಮಿಕ,ಸಾಮಾಜಿಕ,ಸಾಂಸ್ಕೃತಿಕಕಾರ್ಯಕ್ರಮಗಳು 11ದಿನಗಳ ಕಾಲನಡೆಯಲಿದ್ದು, ಒಟ್ಟು 1ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ಸಮಿತಿಯಅಧ್ಯಕ್ಷ ಅಣ್ಣಪ್ಪ ಕಾಮತ್ತಿಳಿಸಿದ್ದಾರೆ.
ನ.27ರಂದುಉಡುಪಿ ಪಲಿಮಾರು ಮಠದ ಶ್ರೀವಿದ್ಯಾದೀಶತೀರ್ಥ ಸ್ವಾಮೀಜಿ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಆಶಿರ್ವಚನ ನೀಡಲಿದ್ದಾರೆ.ಡಿ.4ರಂದುಕವಳೆ ಮಠದ ಶಿವಾನಂದ ಸರಸ್ವತಿಸ್ವಾಮೀಜಿ ಹಾಗೂ ಚಿತ್ರಾಪುರ ಮಠದಶ್ರೀ ಸದ್ಯೋಜಾತ ಶಂಕರಾಶ್ರಮಸ್ವಾಮೀಜಿ ಆಗಮಿಸಲಿದ್ದಾರೆ.ಗಾಯಕರಾದ ಶಂಕರ್ಮಹದೇವನ್, ಮಹೇಶ್ಕಾಳೆ ಸೇರಿದಂತೆ ಹಲವು ಖ್ಯಾತನಾಮರುಸಾಂಸ್ಕೃತಿಕ ಕಾರ್ಯಕ್ರಮನಡೆಸಿಕೊಡಲಿದ್ದಾರೆ.