_1763119638474.webp?w=480&auto=format%2Ccompress&fit=max)
_1763119638474.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ದೇಶದ ಲಕ್ಷಾಂತರಕುಟುಂಬಗಳ ಜೀವನ ನಿರ್ವಹಣೆಗೆಕಾರಣವಾಗಿರುವ ಸಹಕಾರಿ ಕ್ಷೇತ್ರಪ್ರಗತಿಯಾದರೆ ಅದರಿಂದ ದೇಶದಅಭಿವೃದ್ಧಿ ಸಾಧ್ಯ.ಆದ್ದರಿಂದ ಮಹಾತ್ಮಗಾಂಧೀಜಿ,ಜವಾಹರಲಾಲ್ನೆಹರು ಸಹಕಾರಿ ಕ್ಷೇತ್ರದಕ್ಕೆಹೆಚ್ಚಿನ ಒತ್ತು ನೀಡಿದ್ದರುಎಂದು ಸಿಎಂ ಸಿದ್ದರಾಮಯ್ಯಹೇಳಿದ್ದಾರೆ.
ಅರಮನೆಮೈದಾನದಲ್ಲಿ ಕರ್ನಾಟಕ ಸಹಕಾರಮಹಾಮಂಡಳ ಏರ್ಪಡಿಸಿದ್ದ 72ನೇಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದರು.
ಸಹಕಾರಕ್ಷೇತ್ರ ಪ್ರಗತಿಯಾದರೆ ಅದರಿಂದದೇಶದ ಸರ್ವೋತೋಮುಖ ಅಭಿವೃದ್ಧಿಗೆನಾಂದಿಯಾಗುತ್ತದೆ.ಕರ್ನಾಟಕದ ಗದಗಜಿಲ್ಲೆಯ ಕಣಗಿಹಾಳ್ ಎಂಬ ಗ್ರಾಮದಲ್ಲಿದೇಶ ಮಾತ್ರವಲ್ಲ ಇಡೀ ಏಷ್ಯಾದಲ್ಲೇಮೊದಲ ಸಹಕಾರಿ ಚಳುವಳಿ ಆರಂಭವಾಗಿತ್ತು.ಸಿದ್ಧನಗೌಡರಾಮನಗೌಡ ಪಾಟೀಲರು ಈ ಚಳುವಳಿಯಮುಂಚೂಣಿಯಲ್ಲಿದ್ದು ಸಹಕಾರಿಪಿತಾಮಹ ಎನಿಸಿಕೊಂಡಿದ್ದಾರೆ.ಈ ಕಾರಣಕ್ಕಾಗಿಕರ್ನಾಟಕವನ್ನು ಭಾರತದ ಸಹಕಾರಿರಾಜಧಾನಿ ಎಂದು ಕರೆಯಲಾಗುತ್ತದೆ.ಒಂದು ಗ್ರಾಮಅಭಿವೃದ್ಧಿ ಹೊಂದಬೇಕಾದರೆ,ಒಂದು ಆಸ್ಪತ್ರೆ,ಒಂದು ಶಾಲೆ ಮತ್ತುಒಂದು ಸಹಕಾರಿ ಸಂಘ ಇರಬೇಕು.ಆಗ ಗ್ರಾಮಸರ್ವಾಂಗೀಣ ಅಭಿವೃದ್ಧಿ ಕಾಣುತ್ತದೆಎಂಬುದನ್ನು ಮಹಾತ್ಮ ಗಾಂಧೀಜಿಹೇಳಿದ್ದರು.ಸಹಕಾರ ಕ್ಷೇತ್ರದಿಂದಾಗಿಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆದೊಡ್ಡ ಚೈತನ್ಯ ಸಿಕ್ಕಿದೆ.ಲಕ್ಷಾಂತರಕುಟುಂಬಗಳ ಬದುಕಿಗೆ ಕಾರಣವಾಗಿದೆಎಂದು ಸಿಎಂ ತಿಳಿಸಿದರು.
ತಾವುಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಯಡಿಯೂರಪ್ಪನವರು ಮಾಡಿದ್ದ ಒಂದುಲೀಟರ್ ಹಾಲಿನ ಪ್ರೋತ್ಸಾಹ ಧನ 2ರೂ.ನಿಂದ 3ರೂಏರಿಸಿದ್ದೆ.ಸದ್ಯ ಅದು 5ರೂ.ಗೆಏರಿಕೆಯಾಗಿದೆ.ಆ ಮೂಲಕ ಪ್ರತಿದಿನ5 ಕೋಟಿರೂಪಾಯಿ ಹಾಲು ಉತ್ಪಾದಕರಿಗೆಸಂದಾಯವಾಗುತ್ತಿದೆ.ಕರ್ನಾಟಕದಲ್ಲಿ1 ಕೋಟಿಲೀಟರ್ ಹಾಲು ಪ್ರತಿದಿನಉತ್ಪಾದನೆಯಾಗುತ್ತಿದ್ದು ಅದರಉತ್ಪನ್ನ ಮತ್ತು ಉಪಉತ್ಪನ್ನಗಳನ್ನುನಂದಿನಿ ಹೆಸರಿನಲ್ಲಿ ಮಾರಾಟಮಾಡಲಾಗುತ್ತಿದೆ.ಸಹಕಾರ ಬ್ಯಾಂಕುಗಳಮೂಲಕ 37 ಲಕ್ಷರೈತರಿಗೆ 27 ಸಾವಿರಕೋಟಿ ರೂ. ಸಾಲಸೌಲಭ್ಯವನ್ನು ನೀಡುತ್ತಿರುವರಾಜ್ಯ ಸರ್ಕಾರ,5 ಲಕ್ಷದ ವರೆಗೆಬಡ್ಡಿರಹಿತ ಸಾಲವನ್ನು ನೀಡಿಸಹಕಾರ ಕ್ಷೇತ್ರವನ್ನು ಬಲಪಡಿಸಲುಮಹತ್ವದ ಹೆಜ್ಜೆ ಇರಿಸಿದೆ ಎಂದುಸಿಎಂ ವಿವರಿಸಿದರು.
ಈ ಎಲ್ಲಸಹಕಾರಿ ಕಾರ್ಯಕ್ರಮಗಳುಯಶಸ್ವಿಯಾಗುವಲ್ಲಿ ಕರ್ನಾಟಕಸಹಕಾರ ಮಹಾಮಂಡಳ ತಾಯಿ ಬೇರಿನಂತೆಕೆಲಸ ಮಾಡುತ್ತಿದ್ದು,ಈ ಸಪ್ತಾಹದ ಮೂಲಕಜನರಲ್ಲಿ ಸಹಕಾರದ ಜಾಗೃತಿ ಮೂಡಿಸುವಕೆಲಸ ಮಾಡುತ್ತಿದೆ ಎಂದುಪ್ರಶಂಸಿಸಿದರು.
ಸಮಾರಂಭದಲ್ಲಿ ಸಹಕಾರಿ ಪುರಸ್ಕೃತರಿಗೆ ‘ಸಹಕಾರರತ್ನ’ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.ಕಾರ್ಯಕ್ರಮದಲ್ಲಿಸಹಕಾರ ಮಹಾಮಂಡಳದ ಅಧ್ಯಕ್ಷರಾದಶಾಸಕ ಜಿ.ಟಿ.ದೇವೇಗೌಡ,ರಾಜ್ಯ ವಸತಿಸಹಕಾರ ಮಹಾಮಂಡಳದ ಅಧ್ಯಕ್ಷರಾದಶಾಸಕ ಎಸ್.ಟಿ.ಸೋಮಶೇಖರ್,ಗ್ರಾಮೀಣ ಅಭಿವೃದ್ಧಿಬ್ಯಾಂಕ್ ಅಧ್ಯಕ್ಷ ಶಾಸಕ ಕೆ.ಷಡಕ್ಷರಿ,ಸಹಕಾರಿ ಧುರೀಣರುಹಾಗೂ ಶಾಸಕರಾದ ಪ್ರಕಾಶ್ ಕೋಳಿವಾಡ,ಪುಟ್ಟರಂಗಶೆಟ್ಟಿ,ರಾಜೇಗೌಡ,ನಂಜೇಗೌಡ,ಗಣೇಶ ಪ್ರಕಾಶ್,ಅಲ್ಲಮಪ್ರಭುಪಾಟೀಲ್ ಮಹಾಮಂಡಳದ ಮಾಜಿ ಅಧ್ಯಕ್ಷಶೇಖರಗೌಡ ಮಾಲೀ ಪಾಟೀಲ್ ಮತ್ತಿತರರುಉಪಸ್ಥಿತರಿದ್ದರು.
ಸಹಕಾರಖಾತೆ ಪರ್ಮನೆಂಟ್ ಅಲ್ಲ
ಇತ್ತೀಚೆಗೆಕೆ.ಎನ್.ರಾಜಣ್ಣರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿಸಹಕಾರ ಖಾತೆಯನ್ನು ಹೊಂದಿರುವಮುಖ್ಯಮಂತ್ರಿ ಸಿದ್ದರಾಮಯ್ಯ‘ಸಹಕಾರ ಖಾತೆ ನನ್ನ ಬಳಿ ಇದ್ದು,ನಾನು ಸಹಕಾರಮಂತ್ರಿಯೂ ಹೌದು.ಹಾಗಂತ ಸಹಕಾರಖಾತೆ ಪರ್ಮನೆಂಟ್ ಆಗಿ ನನ್ನ ಬಳಿನೇಇರೋದಿಲ್ಲ’ ಎಂದು ಹೇಳುವ ಮೂಲಕರಾಜಕೀಯ ಸ್ಥಿತ್ಯಂತದ ಪರೋಕ್ಷಸುಳಿವು ನೀಡಿದಂತಿತ್ತು.
ಕಾರ್ಮಿಕ ಶೋಷಣೆಯನ್ನು ತಪ್ಪಿಸುವುದಕ್ಕೆ ಜಾಗತಿಕವಾಗಿ ಆರಂಭವಾದ ಸಹಕಾರ ಸಂಘಗಳು ಭಾರತದಲ್ಲೂ ಬಹಳ ಹಿಂದೆಯೇ ಸ್ಥಾಪನೆಗೊಂಡಿವೆ. 2 ಲಕ್ಷ ಜನ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರಿ ತತ್ವಗಳ ಬಗ್ಗೆ ಶಾಲಾ ಪಠ್ಯದಲ್ಲಿ ಸೇರಿಸುವ ಅಗತ್ಯವಿದೆ.