ಭಾರತದ ಪ್ರವಾಸಿ ತಾಣಗಳಲ್ಲಿನ ಅಶುಚಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದೇಶಿಗ! ಅಸಲಿಗೆ ಆತ ಹೇಳಿದ್ದೇನು? Tourist place

ವಿದೇಶಿ ವ್ಲಾಗರ್​ ಚಿತ್ರ
ವಿದೇಶಿ ವ್ಲಾಗರ್​ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿಯ ಮೇಲಿನ ಮನುಷ್ಯರೇ, ನೀವು ಯಾಕೆ ಹೀಗೆ ಇದ್ದೀರಿ?
  • ನಾನು ಕೇರಳವನ್ನು ಇತರ ಮನುಷ್ಯನಷ್ಟೇ ಪ್ರೀತಿಸುತ್ತೇನೆ.
  • ಈ ಸ್ಥಳ ಎಷ್ಟು ಸುಂದರವಾಗಿದೆಯೋ ಅಷ್ಟೇ ಕಸದ ರಾಶಿಯಿಂದ ತುಂಬಿ ಸಂಪೂರ್ಣವಾಗಿ ಹಾಳಾಗಿದೆ .
ಕೇರಳ: ಭಾರತವು ಅನೇಕ ಸಸ್ಯ- ಪ್ರಾಣಿ ಮೂಲಗಳಿಂದ ಮತ್ತು ಪ್ರವಾಸ ತಾಣಗಳಿಂದ ಕೂಡಿದಂತಹ (Tourist place) ಪ್ರದೇಶವಾಗಿದೆ. ಇಲ್ಲಿಗೆ ಹಲವಾರು ಜನರು ಅಂದರೆ ದೇಶ ವಿದೇಶಗಳಿಂದ ಜನರು ಪ್ರವಾಸಿತಾಣಗಳತ್ತ ಮುಖ ಮಾಡಿ ಇಲ್ಲಿನ ಸೌಂದರ್ಯವನ್ನು ಆನಂದಿಸಲು ಬರುತ್ತಾರೆ. ಹಾಗೆಯೇ ತಮಗೆ ಎಷ್ಟು ದಿನ ಬೇಕೋ ಅಷ್ಟು ದಿನ ಇದ್ದು, ನಂತರ ತಮ್ಮ ವಾಸಸ್ಥಳಗಳಿಗೆ ವಾಪಾಸ್ಸಾಗುತ್ತಾರೆ.
ಆದರೆ, ಕೇರಳದಲ್ಲಿ ಪ್ರವಾಸ ಮಾಡುತ್ತಿರುವ ವಿದೇಶಿ ಪ್ರವಾಸಿಗರೊಬ್ಬರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ ವ್ಲಾಗ್​ವೊಂದರಲ್ಲಿ ಪ್ರವಾಸಿ ತಾಣಗಳಲ್ಲಿ ಕಸಗಳ ರಾಶಿಯನ್ನು ಕಂಡು ಇಲ್ಲಿನ ನೈರ್ಮಲ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.
ಈ ವ್ಲಾಗ್​ನಲ್ಲಿ ಭೂಮಿಯ ಮೇಲಿನ ಮನುಷ್ಯರೇ, ನೀವು ಯಾಕೆ ಹೀಗೆ ಇದ್ದೀರಿ? ನಾನು ಕೇರಳವನ್ನು ಇತರ ಮನುಷ್ಯನಷ್ಟೇ ಪ್ರೀತಿಸುತ್ತೇನೆ, ಆದರೆ ವರ್ಕಲಾದಲ್ಲಿ ಬಹಳ ಕೆಟ್ಟ ದೃಶ್ಯವನ್ನು ನಾನು ನೋಡಿದೆ. ನಾನು ಇಲ್ಲಿ ಬಂಡೆಗಳ ಅಂಚಿನಲ್ಲಿ ನಿಂತಿದ್ದೇನೆ. ಈ ಸ್ಥಳ ಎಷ್ಟು ಸುಂದರವಾಗಿದೆಯೋ ಅಷ್ಟೇ ಕಸದ ರಾಶಿಯಿಂದ ತುಂಬಿ ಸಂಪೂರ್ಣವಾಗಿ ಹಾಳಾಗಿದೆ ಎಂದು ಹೇಳಿದ್ದಾರೆ.
ಈ ಪ್ರವಾಸಿಗ ಅದ್ಭುತವಾದ ಬಂಡೆಯ ಪಕ್ಕದ ಸುತ್ತಮುತ್ತಲಿನ ಪ್ರದೇಶಗಳನ್ನು ತೋರಿಸುತ್ತಿದ್ದಂತೆಯೇ, ಎಲ್ಲೆಡೆ ಬಿದ್ದಂತಹ ಕಸದ ರಾಶಿಯನ್ನು ತೋರಿಸಿದ್ದಾನೆ. ಈ ಪ್ರದೇಶದಲ್ಲಿ ಸಿಹಿ ಹೊದಿಕೆಗಳು, ಬಾಟಲ್ ಕ್ಯಾಪ್‌ಗಳು, ಚಾಕೊಲೇಟ್ ಪೇಪರ್​ಗಳು, ಪ್ಲಾಸ್ಟಿಕ್ ಬಾಟಲಿಗಳು, ಬಿಯರ್ ಬಾಟಲಿಗಳು, ಫ್ಲಿಪ್-ಫ್ಲಾಪ್‌ಗಳು, ಪ್ಯಾಂಪರ್ಸ್​ಗಳ ರಾಶಿಯೇ ಬಿದ್ದಿದೆ. ಇದನ್ನು ನೋಡಿದಾಗ ಪ್ರದೇಶಗಳು ಎಷ್ಟರ ಮಟ್ಟಿಗೆ ಹಾಳಾಗಿವೆ ಎಂದು ತಿಳಿಯಬಹುದು ಎಂದು ಹೇಳಿದ್ದಾರೆ.
ಪ್ರವಾಸಿ ತಾಣದ ಆವರಣದಲ್ಲಿ ಕಸ ಹಾಕುವ ಮೊದಲು ಒಂದು ಬಾರಿ ಯೋಚಿಸಬೇಕು ಎಂದು ವ್ಲಾಗರ್​ ವಿಡಿಯೋದಲ್ಲಿ ತಿಳಿಸಿದ್ದಾನೆ. ಅದರಂತೆ ಮುಂದಿನ ಬಾರಿ ಯಾವುದೇ ವ್ಯಕ್ತಿಯು ಪ್ರವಾಸಿ ತಾಣಗಳಲ್ಲಿ ಕಸವನ್ನು ಎಸೆಯುವಕ್ಕಿಂತ ಮೊದಲು ಎರಡು ಬಾರಿ ಯೋಚಿಸುವಂತೆ ತಿಳಿಸಿದ್ದಾನೆ.
ಈ ವೀಡಿಯೊ ಭಾರತದಲ್ಲಿ ಪ್ರವಾಸಿಗರ ಅಶುಚಿತ್ವ ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ. ಜನರು ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಪ್ರವಾಸೋದ್ಯಮಕ್ಕೆ ಆರ್ಥಿಕತೆಯಲ್ಲಿ ದೊಡ್ಡ ಪ್ರಯೋಜನವಾಗುತ್ತದೆ ಎಂದು ಬರೆದಿದ್ದಾರೆ.
ಈ ಪೋಸ್ಟ್​ ವೈರಲ್​ ಆದ ಹಿನ್ನಲೆ ಹಲವಾರು ಬಳಕೆದಾರರು ಕಮೆಂಟ್​ ಮಾಡಿದ್ದಾರೆ. ನೀವು ಈ ವಿಡಿಯೋ ಹಂಚಿಕೊಂಡಿದ್ದಕ್ಕೆ ಸಂತೋಷವಾಗಿದೆ. ನಾವು ಸ್ವಚ್ಛವಾಗಿಟ್ಟುಕೊಳ್ಳುವ ಅನೇಕ ಸ್ಥಳಗಳಿವೆ. ನಾವು ಸ್ವಚ್ಛತೆಯ ಬಗ್ಗೆ ಬೇಗನೆ ಕಲಿಯುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net