ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದ ಲಾಲೂ ಪುತ್ರರು; ನಂತರ ಆಗಿದ್ದೇನು..? | Tej Pratap Tejashwi Yadav

Tej Pratap Tejashwi Yadav(ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್)
Tej Pratap Tejashwi Yadav(ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್)
Published on
ಪಾಟ್ನಾ: ಬಿಹಾರ ಚುನಾವಣೆಗೂ ಪ್ರಚಾರ ಸಮಯದಲ್ಲಿ ಪರಸ್ಪರ ಟೀಕಾಪ್ರಹಾರ ನಡೆಸಿದ್ದ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ ಯಾದವ್​ರ ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್, ಪಾಟ್ನಾ ವಿಮಾನ ನಿಲ್ದಾಣದಲ್ಲಿ ಒಬ್ಬರನ್ನೊಬ್ಬರು ನೋಡಿಕೊಂಡರು, ಮಾತನಾಡಿಸದೆ ಹಾಗೆ ಹೋದ ಪ್ರಸಂಗಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಸಿಕ್ಕಿವೆ.
ಸಧ್ಯ ವೈರಲ್​ ಆಗಿರಯವ ವಿಡಿಯೋದಲ್ಲಿ ವಿಮಾನ ನಿಲ್ದಾಣದ ಬಟ್ಟೆ ಅಂಗಡಿಯಲ್ಲಿ ಜಾಕೆಟ್‌ಗಳನ್ನು ಪರಿಶೀಲಿಸಲು ಪ್ರಾರಂಭಿಸುತ್ತಾರೆ. ಈ ವೇಳೆ ಒಬ್ಬ ವ್ಯಕ್ತಿ ಬಂದು ತೇಜಸ್ವಿ ಅಂಗಡಿಯ ಬಳಿ ಹಾದುಹೋಗುತ್ತಿದ್ದಾರೆ ಎಂದು ಹೇಳುತ್ತಾನೆ. ಇದೇ ಸಂದರ್ಭದಲ್ಲಿ ತೇಜಸ್ವಿ ಯಾದವ್​ ವಿಕಾಸಶೀಲ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿಯೊಂದಿಗೆ ಕಾಣಿಸಿಕೊಳ್ಳುತ್ತಾರೆ.
ಈ ವಿಡಿಯೋವನ್ನು ಸೆರೆ ಹಿಡಿದಿರುವ ಸಮದೀಶ್​ ಪರಿಚಯ ಇರುವ ತೇಜಸ್ವಿ ಅವರತ್ತ ಕೈ ಬೀಸುತ್ತಾರೆ. ಈ ವೇಳೆ ಇಬ್ಬರು ನೇರವಾಗಿ ಮಾತನಾಡಲಿಲ್ಲವಾದರು, ಸಮದೀಶ್ ನನ್ನು "ಶಾಪಿಂಗ್ ಕರಾ ರಹೇ ಹೈ ಭೈಯಾ?" ( ಅಣ್ಣ ನಿನಗೆ ಏನಾದರೂ ಖರೀದಿಸುತ್ತಿದ್ದಾನೆಯೇ?" ಯೂಟ್ಯೂಬರ್​ನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಸಮದೀಶ್​ "ಅವರು ನನಗೆ ಉಡುಗೊರೆ ನೀಡುತ್ತಿದ್ದಾರೆ" ಎಂದು ಉತ್ತರಿಸುತ್ತಾನೆ, ಇದಕ್ಕೆ ಪ್ರತಿಯಾಗಿ ತೇಜಸ್ವಿ "ನೀನು ತುಂಬಾ ಅದೃಷ್ಟಶಾಲಿ ಎಂದು ಹೋಗಳುತ್ತಾರೆ.
ತೇಜ್ ಪ್ರತಾಪ್​​​ರ ನೂತನ ಪಕ್ಷವು 22 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅದರಲ್ಲಿ ಅವರ ಕುಟುಂಬದ ಭದ್ರಕೋಟೆ ರಾಘೋಪೂರ್ ಕೂಡ ಸೇರಿದೆ, ಅಲ್ಲಿ ಅವರ ಸಹೋದರ ತೇಜಸ್ವಿ ಆರ್‌ಜೆಡಿಯ ಅಭ್ಯರ್ಥಿಯಾಗಿದ್ದಾರೆ.
ಇದು ಯುದ್ಧಭೂಮಿ
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ತೇಜ್​​ ಪ್ರತಾಪ್​​, ಇದು ಯುದ್ಧಭೂಮಿ. ಇಲ್ಲಿ ಸಹೋದರನೂ ಇಲ್ಲ, ಸೋದರಳಿಯನೂ ಇಲ್ಲ, ಶತ್ರು ಮಾತ್ರ ಇದ್ದಾನೆ ಎಂದು ಹೇಳಿದ್ದಾರೆ. ತೇಜಸ್ವಿಯನ್ನು "ಮಗು" ಎಂದು ಸಂಭೋದಿಸಿದ ತೇಜ್​ ಚುನಾವಣೆಯ ನಂತರ ಅವರಿಗೆ ಆಟಿಕೆ ಸಾಮಾನುಗಳನ್ನು ನೀಡುವುದಾಗಿ ಹೇಳಿದ್ದರು.
ಒಂದು ಕಾಲದಲ್ಲಿ ಲಾಲು ಅವರ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟಿದ್ದ ತೇಜ್ ಪ್ರತಾಪ್, ತಮ್ಮ ವಿಚ್ಛೇದನ ಪ್ರಕರಣ ಬಾಕಿ ಇರುವಾಗಲೇ ಬೇರೆ ಇನ್ನೊಬ್ಬ ಮಹಿಳೆಯೊಂದಿಗೆ 12 ವರ್ಷಗಳ ಕಾಲ ಸಂಬಂಧದಲ್ಲಿರುವುದಾಗಿ ಸ್ವತಃ ತಾವೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಬಹಿರಂಗಪಡಿಸಿದ ನಂತರ ಅವರನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದಿಂದ ಹೊರಹಾಕಲಾಯಿತು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net