ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಪ್ರಮುಖ ವೈಫಲ್ಯ ಎಂದ ತಮಿಳುನಾಡು ಸಚಿವ ರಾಜಾ | SIR

SIR | ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ( X ಚಿತ್ರ)
SIR | ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ( X ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ಪರಿಷ್ಕರಣೆಯು ನೋಟು ಅಮಾನ್ಯೀಕರಣದ ಮತ್ತೊಂದು ರೂಪ
  • ಭಾರತೀಯ ಚುನಾವಣಾ ಆಯೋಗದ ಪ್ರಮುಖ ವೈಫಲ್ಯ
  • ಚುನಾವಣಾ ಆಯೋಗವು ಒಂದೇ ಒಂದು ಆಕ್ಷೇಪಣೆಯನ್ನು ಸ್ವೀಕರಿಸದೆಯೇ ಬಿಹಾರ ಚುನಾವಣೆ ನಡೆಸಿದೆ
ಚೆನ್ನೈ: ಮತದಾರರ ಪಟ್ಟಿ ಪರಿಷ್ಕರಣೆಯು ನೋಟು ಅಮಾನ್ಯೀಕರಣದ ಮತ್ತೊಂದು ರೂಪವಾಗಿದ್ದು, ಇದು ಭಾರತೀಯ ಚುನಾವಣಾ ಆಯೋಗದ ಪ್ರಮುಖ ವೈಫಲ್ಯ ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಆರೋಪಿಸಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ರಾಜಾ, ಬಿಹಾರದಲ್ಲಿ ಲಕ್ಷಾಂತರ ಮತಗಳನ್ನು ಡಿಲೀಟ್​ ಮಾಡಲಾಗಿದೆ, ಈ ವಿಷಯದಲ್ಲಿ ಚುನಾವಣಾ ಆಯೋಗವು ಒಂದೇ ಒಂದು ಆಕ್ಷೇಪಣೆಯನ್ನು ಸ್ವೀಕರಿಸದೆಯೇ ಚುನಾವಣೆ ನಡೆಸಿದ್ದು, ಇದು ಪಾರದರ್ಶಕತೆ ಹೊಂದಿಲ್ಲ ಎಂದರು.
ರಾಜ್ಯದ ನಾಗರಿಕರು ಮತ್ತು ವಿರೋಧ ಪಕ್ಷಗಳೊಂದಿಗಿನ ಆಯೋಗದ ಸಂವಹನವನ್ನು ಪ್ರಶ್ನಿಸಿದ ರಾಜಾ, ನಮೂನೆ 6 ಮತ್ತು 7 ರ ಗೊಂದಲವು ವ್ಯವಸ್ಥೆಯಲ್ಲಿನ ಅಂತರವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು. ವಿದ್ಯಾವಂತ ಜನಸಾಮಾನ್ಯರಿಗೂ ಸಹ SIR ಜಟಿಲವಾಗಿದ್ದು, ಬಿಹಾರದಲ್ಲಿನ ಜನರಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿದರು.
ಡಿಎಂಕೆಯ ಡಿಜಿಟಲ್ ಬೂತ್ ಏಜೆಂಟ್‌ಗಳಿಂದಾಗಿ ತಮಿಳುನಾಡಿನಲ್ಲಿ ಮತಗಳು ರಕ್ಷಣೆಯಾಗುತ್ತವೆ ಎಂದಿರುವ ರಾಜಾ, ಹೆಚ್ಚಿನ ಸಂಖ್ಯೆಯ ಬಿಎಲ್‌ಎ2 ಏಜೆಂಟ್‌ಗಳು ಪ್ರತಿಯೊಂದು ಬೂತ್‌ನಲ್ಲಿ ಪಕ್ಷದ ಉಪಸ್ಥಿತಿಯು ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಆಯೋಗ ತಮಿಳುನಾಡಿನಲ್ಲಿ ಚುನಾವಣೆ ನಡೆಸುತ್ತಿದೆ. ಇಲ್ಲಿ ಹಿಂದಿ ಭಾಷೆಯ ಅಗತ್ಯವಿಲ್ಲ, ಸುಪ್ರೀಂ ಕೋರ್ಟ್‌ನಲ್ಲಿ ಪಕ್ಷದ ಆಕ್ಷೇಪಣೆ ಸಲ್ಲಿಸಿದ್ದರಿಂದಲೇ ಆಧಾರ್ ಅನ್ನು ಅಂಗೀಕೃತ ದಾಖಲೆಯಾಗಿ ಸೇರಿಸಲು ಕಾರಣವಾಯಿತು ಎಂದು ಹೇಳಿದರು. ವಲಸೆ ಕಾರ್ಮಿಕರ ವಿಷಯಕ್ಕೆ ಬಂದಾಗ ಸ್ಪಷ್ಟತೆ ಅಗತ್ಯ, ನಮ್ಮ ರಾಜ್ಯ, ಬಿಹಾರಿ ನಿವಾಸಿಗಳು ಸೇರಿದಂತೆ ದೇಶದ ಬೇರೆ ಭಾಗದ ಜನರನ್ನು ಸ್ವಾಗತಿಸಿದೆ,ಆದರೆ, ಇತ್ತೀಚೆಗೆ ಬರುವ ವಲಸೆ ಕಾರ್ಮಿಕರಿಗೆ ಮತದಾನದ ಹಕ್ಕು ಸಿಗದಂತೆ ನಾವು ಮೇಲ್ವಿಚಾರಣೆ ನಡೆಸಬೇಕು, ಕೆಲವು ಪಕ್ಷಗಳು ತಮ್ಮ ಮತಗಳನ್ನು ಹೆಚ್ಚಿಸಲು ಈ ಲೋಪದೋಷವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಆರೋಪಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net