ಬಾಬಾ ಸಿದ್ದಿಕ್ ಕೊಲೆ ಪ್ರಕರಣ: ಅಮೆರಿಕದಿಂದ ಆರೋಪಿ ಅನ್ಮೋಲ್ ಬಿಷ್ಣೋಯ್ ಗಡಿಪಾರು| Anmol Bishnoi

ಅನ್ಮೋಲ್ ಬಿಷ್ಣೋಯ್
ಅನ್ಮೋಲ್ ಬಿಷ್ಣೋಯ್
Published on
ನವದೆಹಲಿ: ಮಹಾರಾಷ್ಟ್ರದ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅನ್ಮೋಲ್ ಬಿಷ್ಣೋಯ್​​ನನ್ನು(Anmol Bishnoi) ಅಮೆರಿಕಾದಿಂದ ಭಾರತಕ್ಕೆ ಗಡಿಪಾರಾಗಿದ್ದು, ನಾಳೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಮಂಗಳವಾರ(ನ. 18) ವರದಿಯಾಗಿದೆ.

ಈ ಕುರಿತು ಬಾಬಾ ಸಿದ್ದಿಕ್ ಮಗ ಜಿಶನ್ ಸಿದ್ದಿಕ್​ಗೆ ಇ-ಮೇಲ್ ಕಳಿಸಿರುವ ಕೇಂದ್ರ ಗೃಹ ಇಲಾಖೆ, ಆರೋಪಿ ಅನ್ಮೋಲ್ ಬಿಷ್ಣೋಯ್​ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ ನಿಮಗೆ ತಿಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್, ಮೇ 2022ರಲ್ಲಿನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕೊಲೆ, ಹಾಗೂ 2024 ಅಕ್ಟೋಬರ್​ನಲ್ಲಿ ನಡೆದ ಬಾಬಾ ಸಿದ್ದಿಕ್ ಅವರ ಕೊಲೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಏಪ್ರಿಲ್ 14ರಂದು ಬಾಂದ್ರಾ ಪ್ರದೇಶದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯಲ್ಲೂ ಈತನ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇನ್ನೂ ಈ ಹಿಂದೆ ಎನ್​ಐಎ ಅನ್ಮೋಲ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net