ಬಿಹಾರ ಚುನಾವಣೆ ಫಲಿತಾಂಶ ಬಗ್ಗೆ ವಾಗ್ವಾದ; 22 ವರ್ಷದ ಯುವಕನನ್ನೇ ಹತ್ಯೆಗೈದ ಸ್ವಂತ ಮಾವಂದಿರು | Murder

ತೂಫಾನಿ ಮಾಂಝಿ ಮತ್ತು ರಾಜೇಶ್ ಮಾಂಝಿ ಆರೋಪಿಗಳು
ತೂಫಾನಿ ಮಾಂಝಿ ಮತ್ತು ರಾಜೇಶ್ ಮಾಂಝಿ ಆರೋಪಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ರಾಜಕೀಯ ವಾಗ್ವಾದ
  • ಯುವಕನೊಬ್ಬನನ್ನು ಆತನ ಮಾವಂದಿರೇ ಕೊಲೆ ಮಾಡಿದ ಆರೋಪ
ಭೋಪಾಲ್: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಡೆದ ರಾಜಕೀಯ ವಾಗ್ವಾದ, ವೈಯಕ್ತಿಕ ಜಗಳಕ್ಕೆ ತಿರುಗಿದ ಪರಿಣಾಮ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ 22 ವರ್ಷದ ಯುವಕನೊಬ್ಬನನ್ನು ಆತನ ಮಾವಂದಿರೇ ಕೊಲೆ(Murder) ಮಾಡಿದ ಘಟನೆ ನಡೆದಿದೆ ಎಂದು ಮಂಗಳವಾರ(ನ. 18) ವರದಿಯಾಗಿದೆ.
ಗುನಾದ ಕಂಟೋನ್ಮೆಂಟ್ ಪೊಲೀಸ್ ಠಾಣೆ ಪ್ರದೇಶದ ಸರ್ಕಾರಿ ವಸತಿ ನಿಲಯದ ನಿರ್ಮಾಣ ಸ್ಥಳದಲ್ಲಿ ಭಾನುವಾರ ತಡರಾತ್ರಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ಯುವಕನನ್ನು ಶಂಕರ್ ಮಾಂಝಿ(22) ಎಂದು ಗುರುತಿಸಲಾಗಿದೆ. ತೂಫಾನಿ ಮಾಂಝಿ ಮತ್ತು ರಾಜೇಶ್ ಮಾಂಝಿ ಕೊಲೆ ಮಾಡಿದ ಆರೋಪಿಗಳು. ಮೂವರು ಬಿಹಾರದ ಶಿಯೋರ್ ಜಿಲ್ಲೆಯವರಾಗಿದ್ದು, ಗುನಾದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಗುನಾ ಎಸ್​ಪಿ ಅಂಕಿತ್ ಸೋನಿ, ನಿರ್ಮಾಣ ಹಂತದಲ್ಲಿರುವ ವಸತಿ ಕಟ್ಟಡದ ಬಳಿ ಅಪರಿಚಿತ ಶವ ಬಿದ್ದಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡು, ತನಿಖೆ ನಡೆಸಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆ ಮಾಡಿಗಾದ ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಮೂವರ ನಡುವೆ ನಡೆದ ಮಾತಿನ ಚಕಮಕಿ, ಬಳಿಕ ಹಿಂಸಾಚಾರಕ್ಕೆ ತಿರುಗಿದ ಕಾರಣ ಇಬ್ಬರು ಸೇರಿ ತಮ್ಮ ಸೋದರಳಿಯ ಶಂಕರ್​​ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ಮೂವರು ದಿನದ ಕಟ್ಟಡ ನಿರ್ಮಾಣ ಕಾರ್ಯ ಮುಗಿಸಿ ಮಧ್ಯಪಾನ ಮಾಡಿದ್ದು, ಬಾಟಲಿ ಖಾಲಿಯಾಗುತ್ತಿದ್ದಂತೆ, ಅವರ ಚರ್ಚೆ ಇತ್ತೀಚೆಗೆ ಮುಗಿದ ತಮ್ಮ ರಾಜ್ಯ ಬಿಹಾರ ಚುನಾವಣೆ ಫಲಿತಾಂಶದ ಕಡೆ ತಿರುಗಿದೆ. ಮೃತ ಯುವಕ ಶಂಕರ್ ಕಟ್ಟಾ ಆರ್​ಜೆಡಿ ಬೆಂಬಲಿಗ, ತೇಜಸ್ವಿ ಯಾದವ್ ಬೆಂಬಲಿಗನಾಗಿದ್ದನು. ಮಾವಂದಿರಾದ ತೂಫಾನಿ ಮತ್ತು ರಾಜೇಶ್ ಜೆಡಿಯು ಬೆಂಬಲಿಗರೆನ್ನಲಾಗಿದೆ.
ಕುಡಿದ ಮತ್ತಿನಲ್ಲಿ ಆರಂಭವಾದ ತಮಾಷೆ, ರಾಜಕೀಯ ಜಗಳವಾಗಿ ಬದಲಾಗಿದೆ. ಇಬ್ಬರು ಆರೋಪಿಗಳು ಬಿಹಾರದ ಮಾಜಿಮ ಡಿಸಿಎಂ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ತೀವ್ರ ಗಲಾಟೆಗೆ ಕಾರಣ ಎನ್ನಲಾಗಿದೆ. ಇದರಿಂದ ಶಂಕರ್ ಕೋಪಗೊಂಡು ನಿಂದನೆ ಮಾಡಿದಾಗ ಪ್ರತಿಯಾಗಿ ಮಾವಂದಿರುವ ಅವನನ್ನು ಭೀಕರವಾಗಿ ಹೊಡೆದು ಕೊಲೆ ಮಾಡಿ ನೀರಿನ ಮೋರಿಗೆ ಎಸೆದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net