ಬೆಳಗಾವಿಯಲ್ಲಿ ಎನ್​ಡಿಎ ಮಾದರಿ ಪೊಲೀಸ್ ಅಕಾಡೆಮಿ

bommayi
Published on

ಬೆಳಗಾವಿ: ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಎನ್​ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯ ಅಕಾಡೆಮಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ವಿಶೇಷ ಅಕಾಡೆಮಿಗೆ ತಕ್ಕಂತೆ ಪಠ್ಯಕ್ರಮ ಅಳವಡಿಸಲು ಯೋಜನೆ ಸಿದ್ಧಪಡಿಸಲಾಗುವುದು. ಬೆಳಗಾವಿಯಲ್ಲಿ ಅನೇಕ ರಕ್ಷಣಾ ಸಂಸ್ಥೆಗಳಿದ್ದು, ಇಲ್ಲಿನ ಮಾನವ ಸಂಪನ್ಮೂಲ ಬಳಸಿಕೊಳ್ಳಲು ಈ ನಗರ ಆಯ್ಕೆ ಮಾಡಿಕೊಳ್ಳಲಾಗಿದೆ. ಆರು ತಿಂಗಳಲ್ಲಿ ಅಕಾಡೆಮಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಇಲಾಖೆಗೆ ಸೇರುವ ಸಿಬ್ಬಂದಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ಐಪಿಎಸ್ ಅಧಿಕಾರಿಗಳಿಗೂ ತರಬೇತಿ ಆಗಿರುತ್ತದೆ. ಆದರೆ, ಮಧ್ಯಮ ಹಂತದ ಅಧಿಕಾರಿಗಳು ತರಬೇತಿ ಪಡೆದು ಬಹಳ ವರ್ಷಗಳೇ ಆಗಿರುತ್ತದೆ. ಮಹತ್ವದ ಹುದ್ದೆಗಳಲ್ಲಿರುವ ಮತ್ತು ಬಹುತೇಕ ಸ್ಥಳೀಯರೇ ಆಗಿರುವ ಅವರಿಗೆ ಕೌಶಲ ವೃದ್ಧಿಸುವ ಅಗತ್ಯವಿದೆ. ಅದಕ್ಕಾಗಿ ಮಿಲಿಟರಿ ಅಧಿಕಾರಿಗಳ ಮಾದರಿಯಲ್ಲಿಯೇ ಅವರನ್ನು ಸಜ್ಜುಗೊಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net