ರಾಷ್ಟ್ರೀಯ ಸಿನಿಮಾ ದಿನ; ವಿಶೇಷ ಆಫರ್​ಗೆ ಮಲ್ಟಿಫ್ಲೆಕ್ಸ್​ನ ಎಲ್ಲಾ ಟಿಕೆಟ್ ಸೋಲ್ಡ್​ ಔಟ್

Multiplex
Published on

ನವ ದೆಹಲಿ: ಸೆಪ್ಟೆಂಬರ್ 23 ರಾಷ್ಟ್ರೀಯ ಸಿನಿಮಾ ದಿನ. ಮಲ್ಟಿಪ್ಲೆಕ್ಸ್ ಅಥಾರಿಟಿ ಆಫ್ ಇಂಡಿಯಾ (MAI) ದೇಶದೆಲ್ಲೆಡೆ ಸಿನಿಮಾ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿತ್ತು. ಆ ಪ್ರಯುಕ್ತ ಸೆ.23ರಂದು ದೇಶದ 4000 ಸಾವಿರ ಮಲ್ಟಿಪ್ಲೆಕ್ಸ್ ಸಿನಿಮಾ ಚಿತ್ರಮಂದಿರದ ಟಿಕೆಟ್ ದರ 75 ರೂ. ಎಂದು ನಿಗದಿಸಲಾಗಿತ್ತು. ಇದೀಗ ಎಲ್ಲಾ ಚಿತ್ರಮಂದಿರಗಳು ಭರ್ತಿಯಾಗಿವೆ.

ವಿಶೇಷ ಆಫರ್​​ಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಸಿನಿಮಾ ದಿನ'ದ ಮುಂಚಿತವಾಗಿಯೇ ಎಲ್ಲಾ ಟಿಕೆಟ್​​ಗಳು ಖರೀದಿಯಾಗಿವೆ ಎಂದು ಮಲ್ಟಿಪ್ಲೆಕ್ಸ್ ಅಥಾರಿಟಿ ಆಫ್ ಇಂಡಿಯಾ ಟ್ವೀಟ್ ಮಾಡಿದೆ.

ಸೆ.23 ಸಿನಿಮಾ ದಿನದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಚಿತ್ರಮಂದಿರದತ್ತ ಬರುತ್ತಾರೆ. ಹೀಗಾಗಿ ವಿಶೇಷ ಆಫರ್​​ನ್ನು ನೀಡಿದ್ದೆವು. ಪಿವಿಆರ್, ಐನಾಕ್ಸ್, ಸಿನಿಪೊಲಿಸ್, ಕಾರ್ನಿವಲ್, ಮಿರಾಜ್, ಸಿಟಿಪ್ರೈಡ್, ಏಷ್ಯಾ, ಮುಖ್ತಾ 2, ಮೂವಿ ಟೈಮ್, ವೇವ್, ಎಮ್​​2ಕೆ, ಡೆಲಿಟಿ ಮುಂತಾದ ಮಲ್ಟಿಫ್ಲೆಕ್ಸ್​ ಚಿತ್ರಮಂದಿರಗಳಲ್ಲಿ ರಿಯಾಯಿತಿ ದರ ಘೋಷಿಸಿತ್ತು.

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯದ ಸಿನಿಮಾ ಪ್ರೇಮಿಗಳಿಗೆ, ಮಲ್ಟಿಪ್ಲೆಕ್ಸ್ ಘೋಷಿಸಿದ್ದ ಈ ವಿಶೇಷ ಆಫರ್​ನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಚಿತ್ರಮಂದಿರ ಮತ್ತು ಟಿಕೆಟ್​​ನ ಬೆಲೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ಕಾನೂನು ಪಾಲನೆಯಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net