ನ.14ಕ್ಕೆ ರಾಷ್ಟ್ರೀಯ ಅಡಿಕೆ ತಾಂತ್ರಿಕ ಸಮಾವೇಶ

ಶನಿವಾರ(ನ.14) ಬೆಳಗ್ಗೆ 9 ಗಂಟೆಯಿಂದ ಸಂಜೆ 6ವರೆಗೆ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ(ಐಎಟಿ) ‘ರಾಷ್ಟ್ರೀಯ ಅಡಿಕೆ ತಾಂತ್ರಿಕ ಸಮಾವೇಶ-2026’ ನಡೆಯಲಿದೆ.
ನ.14ಕ್ಕೆ ರಾಷ್ಟ್ರೀಯ ಅಡಿಕೆ ತಾಂತ್ರಿಕ ಸಮಾವೇಶ
ಐಎಟಿ ಅಧ್ಯಕ್ಷ ಡಾ.ಎ.ಬಿ.ಪಾಟೀಲ್
Published on: 

ಬೆಂಗಳೂರು: (National Arecanut Technical Convention) ಕೃಷಿ, ತೋಟಗಾರಿಕೆ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ(ನ.14) ಬೆಳಗ್ಗೆ 9 ಗಂಟೆಯಿಂದ ಸಂಜೆ 6ವರೆಗೆ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ(ಐಎಟಿ) ‘ರಾಷ್ಟ್ರೀಯ ಅಡಿಕೆ ತಾಂತ್ರಿಕ ಸಮಾವೇಶ-2026’ ನಡೆಯಲಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಐಎಟಿ ಡಾ.ಎ.ಬಿ.ಪಾಟೀಲ್, ತೋಟಗಾರಿಕೆ ಬೆಳೆಗಳಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ರಾಜ್ಯದ 8 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಸಾವಿರಾರು ರೈತರು ಜೀವನೋಪಾಯಕ್ಕಾಗಿ ಇದನ್ನು ಬೆಳೆಯುತ್ತಿದ್ದಾರೆ. ಆದರೆ, ಕಾಳುಮೆಣಸು 2.5 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಆದ್ದರಿಂದ, ಅಡಿಕೆಯಲ್ಲಿ ವಿವಿಧ ಮಿಶ್ರ ಬೆಳೆಯಾಗಿ ಕಾಳು ಮೆಣಸು, ಕಾಫಿ, ಎಲಕ್ಕಿ ಮತ್ತು ಕೋಕೊ ಬೆಳೆ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಕೃಷಿ ವೆಚ್ಚ, ಹವಾಮಾನ ವೈಪರೀತ್ಯ, ಕೀಟ ಮತ್ತು ರೋಗಗಳ ಸಮಸ್ಯೆ, ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ವೈಜ್ಞಾನಿಕ ಕೃಷಿ ಪದ್ಧತಿ ಅತ್ಯಗತ್ಯ. ಹಾಗಾಗಿ, ಈ ಸಮಾವೇಶದಲ್ಲಿ ಅಡಿಕೆ ಆಧಾರಿತ ಕೃಷಿ ಪದ್ಧತಿಗಳು, ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಕುರಿತು ಚರ್ಚೆಗಳು ಇರಲಿವೆ ಎಂದರು.

Also Read
ಮುಂಜಾನೆ ಮುದ್ದು ಮಾಡ್ತಿದ್ದ..ಸಂಜೆ ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದಕ್ಕೆ ಸಿಟ್ಟು; ಚಾಕುವಿನಿಂದ ಇರಿದು ಪತಿ ಕೊಂದ ಪತ್ನಿ..Bengaluru
ನ.14ಕ್ಕೆ ರಾಷ್ಟ್ರೀಯ ಅಡಿಕೆ ತಾಂತ್ರಿಕ ಸಮಾವೇಶ

ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ, ಕರ್ನಾಟಕ ಅಡಿಕೆ ಸಹಕಾರ ರತ್ನ ಪ್ರಶಸ್ತಿ, ರೈತಸ್ನೇಹಿ ಕೃಷಿ ವಿಜ್ಞಾನಿ, ಕರ್ನಾಟಕ ಕಾಳುಮೆಣಸು ವೈಜ್ಞಾನಿಕ ಪ್ರಶಸ್ತಿ ಸಾವಯವ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ವಿವಿಧ ಕೃಷಿ ತಂತ್ರಜ್ಞರು ಭಾಗವಹಿಸಲಿದ್ದಾರೆ. ಅಡಿಕೆಯ ಸುಧಾರಿತ ತಳಿಗಳ ಮತ್ತು ವೈಜ್ಞಾನಿಕ ಬೇಸಾಯ ಕ್ರಮಗಳು,ಮಣ್ಣಿನ ಆರೋಗ್ಯ, ಪೋಷಕಾಂಶಗಳ ನಿರ್ವಹಣೆ, ಕಾಳುಮೆಣಸಿನ ಸಂಸ್ಕರಣೆ ಹಾಗೂ ಕೃಷಿ ಪರಿಕರಗಳ ಆಯ್ಕೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಸೇರಿ ಇತರ ವಿಷಯಗಳ ಕುರಿತು ತಜ್ಞರು ವಿಚಾರ ಮಂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.