ನಾಸಾ ಹೊಸ ಮೈಲಿಗಲ್ಲು; ಮೂತ್ರ, ಬೆವರಿನಿಂದ ಕುಡಿಯುವ ನೀರು ಉತ್ಪಾದನೆ!

NASA
Published on

ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ಗಗನಯಾತ್ರಿಗಳು ನೀರಿನ ಉತ್ಪಾದನೆಗಾಗಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಇದು ಭವಿಷ್ಯದ ಕಾರ್ಯಾಚರಣೆಗಳಿಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

ಗಗನಯಾತ್ರಿಗಳು ಮೂತ್ರ ಹಾಗೂ ಬೆವರನ್ನು ನೀರಾಗಿ ಪರಿವರ್ತಿಸುವ ವಿಧಾನವನ್ನ ಕಂಡುಹಿಡಿದಿದ್ದಾರೆ. ಈ ವಿಧಾನವು ಬಾಹ್ಯಾಕಾಶದಲ್ಲಿ ನೀರಿನ ಕೊರತೆಯ ಪ್ರಮಾಣ ತಗ್ಗಿಸಲಿದೆ ಎಂದು ನಾಸಾ ಹೇಳಿದೆ.

ಇಸಿಎಲ್‌ಎಸ್‌ಎಸ್ ವ್ಯವಸ್ಥಾಪಕ ಜಿಲ್. ವಿಲಿಯಮ್ಸ್ ಮಾತನಾಡಿ, 'ಪುನರುತ್ಪಾದಿಸಲಾಗುವ ನೀರು ಭೂಮಿಯಲ್ಲಿ ನೀರಿನ ವಿತರಣಾ ವ್ಯವಸ್ಥೆಯನ್ನೇ ಹೋಲುತ್ತದೆ. ಪುನರುತ್ಪಾದಿಸಲಾದ ನೀರನ್ನು ಫಿಲ್ಟರ್ ಮಾಡಲಾಗಿರುತ್ತದೆ. ಹೀಗಾಗಿ ಭೂಮಿಯಲ್ಲಿ ಸಿಗುವ ಕುಡಿಯುವ ನೀರಿಗಿಂತಲೂ ಹೆಚ್ಚು ಶುಚಿಯಾಗಿರುತ್ತದೆ' ಎಂದಿದ್ದಾರೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಕುಡಿಯಲು, ಆಹಾರ ತಯಾರಿಕೆ ಹಾಗೂ ಇನ್ನಿತರ ಬಳಕೆಗಾಗಿ ಪ್ರತಿದಿನ 1 ಗ್ಯಾಲನ್‌ನಷ್ಟು (ಸುಮಾರು 3 ಲಕ್ಷ ಲೀಟರ್‌ಗೂ ಅಧಿಕ) ನೀರು ಬೇಕಾಗುತ್ತದೆ. ಸದ್ಯ ಗಗನ ಯಾತ್ರಿಗಳು ಕಂಡುಹಿಡಿದಿರುವ ನೀರಿನ ಮರುಸ್ಥಾಪನೆಯ ವಿಧಾನದಿಂದ ಶೇ.98 ರಷ್ಟು ಚೇತರಿಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಬಾಹ್ಯಾಕಾಶದಲ್ಲಿ ಪರಿಸರ ನಿಯಂತ್ರಣ ಮತ್ತು ಜೀವನಕ್ಕೆ ಸಹಕಾರಿಯಾಗುವ ವ್ಯವಸ್ಥೆ (ECLSS) ಬಳಸಿಕೊಂಡು ಆಹಾರ, ಗಾಳಿ ಮತ್ತು ನೀರಿನಂತಹ ಉಪಯುಕ್ತ ವಸ್ತುಗಳನ್ನ ಪುನರುತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಬಾಹ್ಯಾಕಾಶ ನಿಲ್ದಾಣದ ECLSS ವ್ಯವಸ್ಥೆಯು ಗಗನಯಾತ್ರಿಗಳ ಉಸಿರು, ಬೆವರು ಮತ್ತು ಮೂತ್ರದಿಂದ ತೇವಾಂಶವನ್ನು ಸೆರೆ ಹಿಡಿಯಲು ಕ್ಯಾಬಿನ್ ಏರ್ ವಿಶೇಷ ಘಟಕವನ್ನೂ ಸ್ಥಾಪಿಸಲಾಗಿದೆ.

ಇಸಿಎಲ್‌ಎಸ್‌ಎಸ್ ವಿಧಾನವು ಒಂದು ಯಂತ್ರಾಂಶದ ಸಂಯೋಜನೆಯಾಗಿದೆ. ಇದು ತ್ಯಾಜ್ಯದ ನೀರನ್ನು ಸಂಗ್ರಹಿಸಿಕೊಂಡು ವಾಟರ್ ಪ್ರೊಫೆಸಟರ್ ಅಸೆಂಬ್ಲಿಗೆ (WPA) ಕಳುಹಿಸುವ ಮೂಲಕ ನೀರು ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಉತ್ಪಾದಿಸುತ್ತದೆ. ಮೂತ್ರದ ಉಪ್ಪುನೀರಿನಿಂದ ಉಳಿದ ನೀರನ್ನು ಹೊರತೆಗೆಯಲು ಹೊಸ ಸಾಧನ ಕುಡಿಯು ಯೋಗ್ಯವಾದ ನೀರನ್ನು ಉತ್ಪಾದಿಸುತ್ತದೆ. ಈ ವಿಧಾನ ಮುಂದೆ ಉಪಯೋಗಕಾರಿಯಾಗಲಿದೆ ಎಂದು ನಾಸಾ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net