ಆರ್ಟೆಮಿಸ್ ಉಡಾವಣೆ ಮುಂದೂಡಿದ ನಾಸಾ

NASA JPG
Published on

ಫ್ಲಾರಿಡಾ: ಚಂದ್ರಾನ್ವೇಷಣೆಯ ಅತಿ ದೊಡ್ಡ ಯೋಜನೆಯಾದ ‘ಆರ್ಟೆಮಿಸ್- 1 ಮಿಷನ್’ ಉಡಾವಣೆಯನ್ನು ತಾಂತ್ರಿಕ ಕಾರಣದಿಂದ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಮುಂದೂಡಿದೆ.

ಆರ್ಟೆಮಿಸ್ ಅನ್ನು ಹೊತ್ತೊಯ್ಯುವ ದೈತ್ಯ ರಾಕೆಟ್​ನ ಆರ್​ಎಸ್-25 ಇಂಜಿನ್​ನಲ್ಲಿ ತಾಪಮಾನ ಏರಿಕೆಯ ಕಾರಣ ಸೋರಿಕೆ ಕಂಡುಬಂದಿರುವುದರಿಂದ ಸೋಮವಾರ ನಿಗದಿಯಾಗಿದ್ದ ಉಡಾವಣೆಯನ್ನು ಮುಂದೂಡಿದೆ. ಸೆ. 2ಕ್ಕೆ ಹೊಸ ದಿನಾಂಕವನ್ನು ನಿಗದಿ ಮಾಡಿದೆ. ಮಾನವರಹಿತವಾದ ನೌಕೆಯ ಉಡಾವಣೆಯನ್ನು ಕಣ್ತುಂಬಿಕೊಳ್ಳಲು ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್​ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿ ಸಾವಿರ ಜನರು ಸೇರಿದ್ದರು.

ಅಪೋಲೋ 17 ಗಗನನೌಕೆಯ ಯಾನಿಗಳು ಚಂದ್ರನಂಗಳದಲ್ಲಿ ಹೆಜ್ಜೆ ಇರಿಸಿ 50ನೇ ವರ್ಷ ಸಂದಿದ್ದು, ಇದೇ ಸಂದರ್ಭದಲ್ಲಿ ‘ಆರ್ಟೆಮಿಸ್-1’ ಅನ್ನು ಉಡಾವಣೆ ಮಾಡಲಾಗುತ್ತಿದೆ. ಈ ಮಿಷನ್ ಉದ್ದೇಶ ಚಂದ್ರಾನ್ವೇಷಣೆಯಾದರೂ, ಅದು ಮಂಗಳನಲ್ಲಿಗೂ ಪಯಣ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net