ಕಾಡಾನೆ ದಾಳಿಯಿಂದ ಬೈಕ್​ ಸವಾರರು ಜಸ್ಟ್​ ಮಿಸ್​: ಲಾರಿ ಚಾಲಕನ ಸಮಯ ಪ್ರಜ್ಞೆಗೆ ಸಲಾಂ

Elephant Attack
Published on

ನೀಲಗಿರಿ: ಕಾಡಾನೆ ದಾಳಿಯಿಂದ ಬೈಕ್​ ಸವಾರರು ಬಚಾವ್​ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಗುರುವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಧುಮಲೈನಲ್ಲಿ ನಡೆದಿದೆ.

ವಿಡಿಯೋದಲ್ಲಿ ಆನೆ ಲಾರಿಯತ್ತ ಸಾಗುತ್ತಿರುವ ದೃಶ್ಯವಿದೆ. ಲಾರಿಯ ಬಲಭಾಗದಲ್ಲಿ ಆನೆ ಹಾಗೂ ಎಡಭಾಗದಲ್ಲಿ ಬೈಕ್ ಸವಾರರು ಇದ್ದರು. ಕೂಡಲೇ ಲಾರಿ ಚಾಲಕ ಬಾಗಿಲು ತೆರೆದು ಒಳಗೆ ಬರಲು ಹೇಳಿದ. ಅಷ್ಟರಲ್ಲೇ ಆನೆ ಇನ್ನೊಂದು ಬದಿಗೆ ಬಂದರೂ ಲಾರಿಯೊಳಗೆ ಹತ್ತಿದ್ದರಿಂದ ಸವಾರರು ಪಾರಾಗಿದ್ದಾರೆ.

ಲಾರಿ ಚಾಲಕನ ಸಮಯ ಪ್ರಜ್ಞೆ

ವಿಡಿಯೋದಲ್ಲಿ ಆನೆ ಸ್ವಲ್ಪ ಸಮಯ ಅಲ್ಲಿಯೇ ಉಳಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅವರ ಹಿಂದೆ ಕಾರಿನಲ್ಲಿ ಬಂದಿದ್ದ ಮಲಯಾಳಿಗಳು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗುಂಡ್ಲುಪೇಟೆ ಮಾರ್ಗದ ಮೈಸೂರು-ಊಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಂಡೀಪುರ-ಮದುಮಲೈ ವನ್ಯಜೀವಿ ಅಭಯಾರಣ್ಯದ ಮೂಲಕ ಸುಮಾರು ಒಂದು ಕಿಲೋಮೀಟರ್​ಗೂ ಹೆಚ್ಚು ದೂರ ಈ ರಸ್ತೆಯಲ್ಲಿ ಪ್ರಯಾಣಿಸಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net