

ನರಗುಂದ: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ತಾಲೂಕು ಪಂಚಾಯಿತಿ, ಕೊಣ್ಣೂರು ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಇಒ ಎಸ್.ಕೆ. ಇನಾಮದಾರ, ನಮ್ಮ ಜೀವನದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ, ಸಹೋದರಿ, ಮಡದಿ, ಮಗಳಾಗಿ ಬದುಕಿನ ಪ್ರತಿ ಕ್ಷಣದಲ್ಲೂ ಬೆಂಬಲವಾಗಿ ನಿಂತು ಸಾಮಾಜಿಕ ಬದಲಾವಣೆಗೆ ಪ್ರೇರಕ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ ಎಂದರು.
ಕೊಣ್ಣೂರ ಕೆಇಎಸ್ ಪದವಿ ಪೂರ್ವ ಕಾಲೇಜ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ವಚ್ಛತೆಗಾಗಿ ಓಟ ಹಾಗೂ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಓಟದ ಸ್ಪರ್ಧೆಯಲ್ಲಿ ಪಾರ್ವತಿ ಪಾಟೀಲ, ಅನಸೂಯಾ ಕಣಬೂರ. ಅಣಕು ಓಟದ ಸ್ಪರ್ಧೆಯಲ್ಲಿ ಅಕ್ಕಮಹಾದೇವಿ ಕರೆಪ್ಪನವರ, ಗೀತಾ ಚಂದಣ್ಣವರ. ಲಿಂಬು ಚಮಚೆ ಸ್ಪರ್ಧೆಯಲ್ಲಿ ಶರಣವ್ವ ಕುಂದರಗಿ, ಭಾರತಿ ಎಸ್.ಕೆ, ಮ್ಯೂಸಿಕ್ ಚೇರ್ ಸ್ಪರ್ಧೆಯಲ್ಲಿ ಸುಮಂಗಲಾ ಗಡಗಿ, ಅಕ್ಕಮಹಾದೇವಿ ಬಂದೋಜಿ. ಸ್ಕೇಲ್ ಬಿಸ್ಕತ್ ಸ್ಪರ್ಧೆಯಲ್ಲಿ ನೇತ್ರಾ ಬಿಜಾಪುರ, ಕಲಾವತಿ ಮರಚಕ್ಕನವರ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು.
ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಕಳಸಣ್ಣವರ, ಉಪಾಧ್ಯಕ್ಷೆ ಸಂಕನಗೌಡ್ರ ಪಾಟೀಲ, ಸದಸ್ಯರು, ಗ್ರಾಮದ ಸ್ವಚ್ಛತೆಗೆ ಕಾರಣರಾದ ದ್ಯಾಮವ್ವ ಪೂಜಾರ ಹಾಗೂ ಗೂಳ್ಳವ್ವ ಗಾಜಿ ಅವರಿಗೆ ಗ್ರಾಮೀಣ ಸ್ವಚ್ಛತಾ ನಾಯಕಿ ಪ್ರಶಸ್ತಿ ಬೀಡಿ ಸನ್ಮಾನಿಸಿದರು.
ಜೈ ಕಿಸಾನ್ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಗೂಳಪ್ಪ ಹುಜರತ್ತಿ ಕೊಟ್ರೇಶ ಕೊಟ್ರೆಶೆಟ್ಟಿ, ಮುಮ್ತಾಜ್ ಬೇಗಂ ಕುರ್ಲಗೇರಿ, ಹುಸೇನಬಿ ಬುರಡಿ, ಪ್ರಕಾಶ ಚಂದಣ್ಣವರ, ಮೋಹನಕೃಷ್ಣ, ಶಂಕ್ರಮ್ಮ ಹೂಲಗೇರಿ, ಮೋಹನ ಉಪವಾಸೆ, ಚಂದ್ರಗೌಡ ಲಿಂಗನಗೌಡ್ರ, ಪ್ರದೀಪ ಕದಮ ಇತರರು ಇದ್ದರು. ಲಕ್ಷ್ಮಣ ಪೂಜಾರ ನಿರ್ವಹಿಸಿದರು.