ಇಷ್ಟು ಸಣ್ಣ ಇದ್ದೀರಿ.. ನಿಮ್ಮ ಆರೋಗ್ಯದ ಗುಟ್ಟೇನು? ಪಿಎಂ ಪ್ರಶ್ನೆಗೆ ಸಚಿವ ಎಂಟಿಬಿ ಉತ್ತರಿಸಿದ್ದು ಹೀಗೆ

dfgdgfdfg
Published on

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಇಷ್ಟು ಸಣ್ಣ ಇದ್ದೀರಿ.. ನಿಮ್ಮ ಆರೋಗ್ಯದ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ.

ಯಲಹಂಕ ಏರ್​​ಬೇಸ್ ನಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಆಗಮಿಸಿದ್ದ ಸಚಿವ ಎಂಟಿಬಿ ನಾಗರಾಜ್ ಆಗಮಿಸಿದ್ದಾರೆ. ಈ ವೇಳೆ ಎಂಟಿಬಿ ಎಡ ಭುಜದ ಮೇಲೆ ಕೈ ಬೆರಳಿಟ್ಟ ಪಿಎಂ 'ಕ್ಯಾ ಆಪ್ ಇತನಾ ಪತ್ಲಾ ಹೋ' ಎಂದು ಆರೋಗ್ಯದ ಗುಟ್ಟು ಕೇಳಿದ್ದಾರೆ.

ಪಿಎಂ ಪ್ರಶ್ನೆಗೆ ಹಿಂದಿಯಲ್ಲೇ ಉತ್ತರ ನೀಡಿದ ಎಂಟಿಬಿ, ಯೋಗ ಔರ್ ಸ್ವಿಮ್ಮಿಂಗ್ ಕರ್ ರಹಾ ಹೂ ಇಸ್ ಲಿಯೇ ಮೇ ಪತ್ಲಾ ಲಗ್ತಾ ಹೂ ಎಂದಿದ್ದಾರೆ. ಅದಕ್ಕೆ ಅಚ್ಚಾ ಹೈ ಎಂದು ಪಿಎಂ ನಕ್ಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net