ನಂಜನಗೂಡಲ್ಲಿ ಮತದಾರರ ಜಾಗೃತಿ ಜಾಥಾ

07NGD2
????????????????????????????????????
Published on

ನಂಜನಗೂಡು: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಮತದಾರರ ಮಿಂಚಿನ ನೋಂದಣಿ ಅಭಿಯಾನ ಕುರಿತು ಸೋಮವಾರ ಪ್ರತ್ಯೇಕವಾಗಿ ಜಾಗೃತಿ ಜಾಥಾ ನಡೆಸಿದರು.
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜಾಥಾಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಿ.ಮಹೇಶ್ ಅತ್ತಿಖಾನೆ ಹಸಿರು ನಿಶಾನೆ ತೋರಿಸಿದರು.

ರಾಷ್ಟ್ರಪತಿ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಎಂಜಿಎಸ್ ರಸ್ತೆ ಸೇರಿ ಪ್ರಮುಖ ಕಡೆಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳಿದ ವಿದ್ಯಾರ್ಥಿಗಳ ಮತದಾರರ ಪಟ್ಟಿಗೆ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳುವಂತೆ ಭಿತ್ತಿಫಲಕಗಳನ್ನು ಪ್ರದರ್ಶಿಸುತ್ತ ಗಮನ ಸೆಳೆದರು. ಇನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದೇವೀರಮ್ಮನಹಳ್ಳಿ ಹೊಸ ಬಡಾವಣೆಗಳಲ್ಲಿ ತೆರಳಿ ಮಿಂಚಿನ ನೋಂದಣಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net