ಮಹಾ ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನ ಲಭ್ಯ! Maha Kumbh Mela

KMF
Published on

ಬೆಂಗಳೂರು: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನಗಳು ದೊರೆಯಲಿವೆ(Nandini product available at Maha Kumbh Mela!).

ನಂದಿನಿ ಯುಎಚ್‌ಟಿ ಗುಡ್‌ಲೈಫ್ ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಮೆ.ಚಾಯ್ ಪಾಯಿಂಟ್‌ನೊಂದಿಗೆ ಕೆಎಂಎ್ ಪಾಲುದಾರಿಕೆ ಪಡೆದಿದೆ.

ಮೆ.ಜಾಯ್ ಪಾಯಿಂಟ್ ಭಾರತದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿರುವುದಲ್ಲದೇ, ಮಹಾ ಕುಂಭ ಮೇಳದಲ್ಲಿ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಮಹಾ ಕುಂಭ ಮೇಳವು ೆ.26 ರವರೆಗೆ ನಡೆಯಲಿದ್ದು ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು

ಆಕರ್ಷಿಸುವ ನಿರೀಕ್ಷೆಯಿದೆ.

ಈ ಸಹಯೋಗದ ಭಾಗವಾಗಿ, ಮೆ.ಚಾಯ್ ಪಾಯಿಂಟ್ ಮಹಾ ಕುಂಭ ಮೇಳವನ್ನು ಆಯೋಜಸಲಾಗಿರುವ ಸಂಕೀರ್ಣದಲ್ಲಿ 10 ಮಳಿಗೆಗಳನ್ನು ತೆರೆದಿದ್ದು, ಆ ಮಳಿಗೆಗಳ ಮೂಲಕ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಒಂದು ಕೋಟಿ ಕಪ್‌ಗಳಗಿಂತಲೂ ಹೆಚ್ಚು ಚಹಾ ತಯಾರಿಸಿ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೇ ಸಮಾರಂಭದಲ್ಲಿ ಅತೀ ಹೆಚ್ಚು ಕಪ್ ಚಹಾ ಮಾರಾಟ ಮಾಡಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿ ಹೊಂದಿರುತ್ತದೆ.

ಮಹಾ ಕುಂಭ ಮೇಳದಲ್ಲಿ ಸಿದ್ಧಪಡಿಸಲಾಗುವ ಪ್ರತಿಯೊಂದು ಕಪ್ ಚಹಾವು ನಂದಿನಿಯ ಪರಿಶುದ್ಧ ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಇದು ಚಹಾ ಉತ್ಸಾಹಿಗಳಗೆ ಆಹ್ವಾದಕರ ಅನುಭವ ನೀಡಲಿದೆ.

ನಂದಿನಿ ಉತ್ಪನ್ನಗಳ ಮಾರಾಟ

ಚಹಾದ ಜೊತೆಗೆ ಮೆ.ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ಸಿಹಿ ಉತ್ಪನ್ನ ಮತ್ತು ಮಿಲ್ಕ್ ಶೇಕ್‌ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಈ ಭವ್ಯ ಅಧ್ಯಾತ್ಮಿಕ ಮಹಾಕೂಟದಲ್ಲಿ ನಂದಿನಿ ಬ್ರ್ಯಾಂಡ್‌ನ ಉಪಸ್ಥಿತಿಯು ಮತ್ತಷ್ಟು ಹೆಚ್ಚಾಗಿರುತ್ತದೆ.

ಹೆಜ್ಜೆ ಗುರುತು ವಿಸ್ತರಿಸಲು ಸಹಕಾರಿ

ಕರ್ನಾಟಕ ಹಾಲು ಮಹಾ ಮಂಡಳ ಮತ್ತು ಮೆ.ಚಾಯ್ ಪಾಯಿಂಟ್ ಪಾಲುದಾರಿಕೆಯು ರಾಷ್ಟ್ರದ ಉತ್ತರ ಭಾಗದ ರಾಜ್ಯಗಳ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಹಾಗೂ ರಾಷ್ಟ್ರವ್ಯಾಪ್ತಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದ್ದು, ಇದು ಕರ್ನಾಟಕ ಹಾಲು ಮಹಾಮಂಡಳದ ಬದ್ಧತೆ ಹಾಗೂ ಸಮರ್ಪಣಾ ಮನೋಭಾವವನ್ನು ಸಾರಲಿದೆ.

ಮೆ.ಚಾಯ್ ಪಾಯಿಂಟ್ ಅವರು ನಂದಿನಿಯ ದೀರ್ಫಾವಧಿ ಗ್ರಾಹಕರಾಗಿರುವುದಲ್ಲದೇ, ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಎಚ್‌ಟಿ ಗುಡ್‌ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ.

|ಕರ್ನಾಟಕ ಹಾಲು ಮಹಾಮಂಡಳ ಕುಂಭ ಮೇಳದಲ್ಲಿ ಮೆ.ಚಾಯ್ ಪಾಯಿಂಟ್ ಅವರೊಂದಿಗೆ ಪಾಲುದಾರರಾಗಲು ಅತ್ಯಂತ ಉತ್ಸುಕವಾಗಿದೆ. ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರದರ್ಶಿಸಿ, ವೈವಿಧ್ಯಮಯ ಗ್ರಾಹಕರಿಗೆ ಒದಗಿಸುವ ಮತ್ತು ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆಯನ್ನು ಬಲಪಡಿಸಲು ಇದು ಒಂದು ಸುವರ್ಣ ಅವಕಾಶವಾಗಿದೆ. ಈ ಐತಿಹಾಸಿಕ ಮೇಳದಲ್ಲಿ ನಂದಿನಿಯ ಉತ್ಪನ್ನಗಳ ಲಭ್ಯತೆಯೊಂದಿಗೆ ಮಹಾ ಕುಂಭ ಮೇಳದ ಯಶಸ್ಸನ್ನು ಸಿರೀಕ್ಷಿಸುತ್ತಿದ್ದೇವೆ.

-ಬಿ.ಶಿವಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಹಾಲು ಮಹಾ ಮಂಡಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net