

ಬೆಂಗಳೂರು: ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 2 ರಿಂದ 3 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಕೆಎಂಎಫ್ ಆಡಳಿತ ಮಂಡಳಿ ಹಾಲು ದರ ಹೆಚ್ಚಳ ಕುರಿತ ಮಹತ್ವದ ಸಭೆಯನ್ನು ನಾಳೆ ನಡೆಸಲಿದೆ ಎಂದು ತಿಳಿದು ಬಂದಿದೆ.
ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ರಾಜ್ಯದ ಎಲ್ಲ 14 ಹಾಲು ಒಕ್ಕೂಟಗಳು ಕೆಎಂಎಫ್ಗೆ ಪ್ರಸ್ತಾವನೆ ಸಲ್ಲಿಸಿವೆ. ಹೀಗಾಗಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ರೈತರಿಂದ ಖರೀದಿಸುತ್ತಿರುವ ಹಾಲಿನ ದರ ಕೂಡ ಹೆಚ್ಚಳವಾಗುವ ಬಗ್ಗೆ ಚರ್ಚೆ ನಡೆಯಲಿದೆ. ಈಗ ನಂದಿನಿ ಹಾಲಿನ ದರ ಪತ್ರಿ ಲೀಟರ್ಗೆ 19 ರಿಂದ 20 ರೂಪಾಯಿವರೆಗೆ ಇದೆ. (ದಿಗ್ವಿಜಯ ನ್ಯೂಸ್)