

ಬೆಂಗಳೂರು: ನಟಿ ಶ್ರೀಲೀಲಾ (sreeleela ) ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೊರಹೊಮ್ಮುತ್ತಿದ್ದಾರೆ. ಈಗಾಗಲೇ ಹಲವು ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಈ ಮೋಹನಾಂಗಿ ಇತ್ತೀಚೆಗಷ್ಟೇ ಪುಷ್ಪ 2 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಮಿಂಚಿದ್ದರು. ಈ ನಟಿ ಮದುವೆಯ ಜವಾಬ್ದಾರಿಯನ್ನು ಸ್ಟಾರ್ ಹೀರೋ ತೆಗೆದುಕೊಂಡಿದ್ದಾರಂತೆ. ಈ ಕುರಿತಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಇತ್ತೀಚೆಗೆ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ ಎನ್‌ಸಿಕೆ ಟಾಕ್ ಶೋಗೆ ಅತಿಥಿಯಾಗಿ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಜಾತಿ ರತ್ನಂ ನವೀನ್ ಪೋಲಿಶೆಟ್ಟಿ ಕೂಡ ಸದ್ದು ಮಾಡಿದರು.
ಈ ಸಂದರ್ಭದಲ್ಲಿ ಶ್ರೀಲೀಲಾ ಕುರಿತು ಮಾತನಾಡಿದ ಬಾಲಕೃಷ್ಣ.. ಶ್ರೀಲೀಲಾ ನನ್ನ ಮಗಳಿದ್ದಂತೆ. ಶ್ರೀಲೀಲಾ ಅವರ ಮದುವೆ ತಂದೆಯಂತೆ ಇರುವ ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಚಿತ್ರದಲ್ಲಿ ಬಾಲಯ್ಯ ಅವರ ಮಗಳಾಗಿ ಶ್ರೀಲೀಲಾ ನಟಿಸಿದ್ದರು. ಅಂದಿನಿಂದ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ ಎನ್ನಲಾಗಿದೆ.
ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಸುಂದರ ತಾರೆ ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಲೀಲಾ ಈಗಾಗಲೇ ಮಹೇಶ್ ಬಾಬು, ಅಲ್ಲು ಅರ್ಜುನ್, ರವಿತೇಜ, ನಂದಮೂರಿ ಬಾಲಕೃಷ್ಣ, ರವಿತೇಜ, ನಿತಿನ್, ರಾಮ್, ವೈಷ್ಣವ್ ತೇಜ್ ಮುಂತಾದ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.