

ಗೋಣಿಕೊಪ್ಪಲು: ನಗರದ ಮೂರನೇ ವಿಭಾಗದ ಹಳೇ ಅಂಚೆ ಕಚೇರಿಗೆ ತೆರಳುವ ರಸ್ತೆಗೆ ಸ್ವಾಮಿ ವಿವೇಕಾನಂದ ಬಡಾವಣೆ ಎಂದು ನಾಮಕರಣ ಮಾಡುವ ಮೂಲಕ ನೂತನ ನಾಮಫಲಕವನ್ನು ಅನಾವರಣಗೊಳಿಸಲಾಯಿತು.
ಬುಧವಾರ ನೂತನ ಬಡಾವಣೆಯ ಅಧ್ಯಕ್ಷ ಟಿ.ಪಿ.ಗಾಂಧಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ.ಮಂಜುಳಾ, ಸದಸ್ಯ ಕೆ.ರಾಜೇಶ್ ಬಡಾವಣೆಯ ನಾಮಫಲಕವನ್ನು ಅನಾವರಣಗೊಳಿಸಿದರು.
ಈ ವೇಳೆ ಬಡಾವಣೆ ಆಡಳಿತ ಮಂಡಳಿ ಪದಾಧಿಕಾರಿಗಳಾದ ನರೇಂದ್ರ, ವಿ.ಆರ್.ಸುನೀಲ್, ವಿ.ಆರ್.ಸಪ್ತೇಶ್, ವಿಕ್ರಂ, ಕರುಣ, ರಾಮಶೇಠ್ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಬಡಾವಣೆಯ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಗರದ ಹಿರಿಯ ವೈದ್ಯರಾದ ಡಾ.ಶಿವಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಬಡಾವಣೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.