ಕ್ರೋಮರ್​ ಇಂಡಿಯಾ ಕೋಲಾರ ಹೆಸರಿಡಿ

klr urs
ಕೋಲಾರದ ಶ್ರೀದೇವರಾಜ ಅರಸು ವೈದ್ಯಕಿಯ ಹಾಗೂ ಸಂಶೋದನಾ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್​.ಎನ್​.ಪ್ರಸಾದ್​ ಮಾತನಾಡಿದರು. ಡಾ.ಕೆ.ಪ್ರಭಾಕರ್​, ಡಾ.ಕೃಷ್ಣಪ್ಪ ಇದ್ದರು.
Published on

ಕೋಲಾರ: ಜಿಲ್ಲೆಯ ಮಹಿಳೆಯಲ್ಲಿ ಅಪರೂಪದ ರಕ್ತದ ಗುಂಪು ಪತ್ತೆಯಾಗಿದ್ದು, ಅದಕ್ಕೆ ಕ್ರೋಮರ್​ ಇಂಡಿಯಾ ಕೋಲಾರ ಅಂತ ಹೆಸರಿಡಬೇಕು ಎಂದು ಶ್ರೀ ದೇವರಾಜ ಅರಸು ವೈದ್ಯಕಿಯ ಹಾಗೂ ಸಂಶೋಧನಾ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್​.ಎನ್​.ಪ್ರಸಾದ್​ ಒತ್ತಾಯಿಸಿದರು.

ನಗರದ ಶ್ರೀದೇವರಾಜ ಅರಸು ಮಹಾವಿದ್ಯಾಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯು ಹೃದಯ ಶಸ್ತ್ರಚಿಕಿತ್ಸೆಗಾಗಿ 2023ರ ಡಿಸೆಂಬರ್​ನಲ್ಲಿ ಆರ್​.ಎಲ್​.ಜಾಲಪ್ಪ ನಾರಾಯಣ ಹೃದಯ ಕೇಂದ್ರಕ್ಕೆ ದಾಖಲಾಗಿದ್ದರು, ಶಸ್ತ್ರಚಿಕಿತ್ಸೆಗೆ ಕ್ರಾಸ್​ ಮ್ಯಾಚಿಂಗ್​ಗೆ ಒ ನೆಗಟಿವ್​ ರಕ್ತ ಅವಶ್ಯ ಇತ್ತು. ಆದ್ದರಿಂದ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯ ರಕ್ತ ಕೇಂದ್ರಕ್ಕೆ ಕಳುಹಿಸಲಾಯಿತು. ಆಗ ರಕ್ತ ಹೊಂದಾಣಿಕೆಯಾಗಲಿಲ್ಲ, ಮತ್ತು 3 ಸೆಲ್​ ಆಂಟಿಬಾಡಿ ಸ್ಕ್ರೀನಿಂಗ್​ ಪಾಸಿಟಿವ್​ ಕಂಡುಬಂದ ಕಾರಣ, ರೋಗಿಯ ರಕ್ತ ಮಾದರಿ, ಇಮ್ಯುನೋಹೆಮಟಾಲಜಿ ಮತ್ತು ಬ್ಲಡ್​ ಟ್ರಾನ್ಸ್​ಫ್ಯೂಷನ್​ ವಿಭಾಗಾಧ್ಯಕ್ಷ ಡಾ.ಸುಭಾಶಿಷ್​ ದಾಸ್​ ಮತ್ತು ಪ್ಯಾಥಾಲಜಿ ವಿಭಾಗದ ಪ್ರೊ.ಡಾ.ಹೇಮಲತಾ ಅವರ ಮಾರ್ಗದರ್ಶನದಲ್ಲಿ, ಪ್ರಾದೇಶಿಕ ಪರೀಕ್ಷಾ ಕೇಂದ್ರ ಇಮ್ಯುನೋಹೆಮಟಾಲಜಿ ರೆಫರೆನ್ಸ್​ ಲ್ಯಾಬೊರೇಟರಿ, ರೋಟರಿ ಟಿಟಿಕೆ ಬ್ಲಡ್​ ಸೆಂಟರ್​, ಬೆಂಗಳೂರು ಮೆಡಿಕಲ್​ ಸರ್ವೀಸಸ್​ ಟ್ರಸ್ಟ್​ಗೆ ಕಳುಹಿಸಲಾಯಿತು. ಅಲ್ಲಿ 11 ಸೆಲ್​ ಆಂಟಿಬಾಡಿ ಸ್ಕ್ರೀನಿಂಗ್​ ನಡೆಸಿದಾಗ ಅದು ಪಾನ್​-ರಿಯಾಕ್ಟಿವ್​ ಎಂದು ಪತ್ತೆಯಾಯಿತು ಎಂದು ತಿಳಿಸಿದರು.

ಬಳಿಕ ರೋಗಿಯ ರಕ್ತ ಮಾದರಿ ಇಂಗ್ಲೆಂಡ್​ನ ಬ್ರಿಸ್ಟಲ್​ನಲ್ಲಿರುವ ಅಂತಾರಾಷ್ಟ್ರೀಯ ರಕ್ತಗುಂಪು ಸೂಚನಾ ಪ್ರಯೋಗಾಲಯಕ್ಕೆ ಕಳುಹಿಸಿ, ಆಣ್ವಿಕ ಪರೀಕ್ಷೆಗಳ ಆಧಾರದ ಮೇಲೆ ಕ್ರೋಮರ್​ ಇಂಡಿಯಾ ಬೆಂಗಳೂರು (ಸಿಆರ್​ಐಬಿ) ಎಂದು ಹೆಸರಿಟ್ಟಿದ್ದಾರೆ. ಈ ರಕ್ತದ ಗುಂಪು ಕೋಲಾರ ಜಿಲ್ಲೆಯ ರೋಗಿಯಿಂದ ಪತ್ತೆಯಾಗಿದ್ದು, ಕ್ರೋಮರ್​ ಇಂಡಿಯಾ ಕೋಲಾರ ಎಂದು ಹೆಸರಿಡಬೇಕು ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್​, ವೈದ್ಯಕಿಯ ನಿರೀೆ ಡಾ.ಜೆ.ಕೃಷ್ಣಪ್ಪ, ಉಪ ಪ್ರಾಂಶುಪಾಲೆ ಡಾ.ವಿನುತಾ ಶಂಕರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net