ಏರ್​ಪೋರ್ಟ್​ನಲ್ಲಿ ನಮಾಜ್​ ಮಾಡಿದರೆ ತಪ್ಪೇನು; ಎಚ್​. ಆಂಜನೇಯ ಪ್ರಶ್ನೆ

10-RNR-07
Published on

ಹಾವೇರಿ: ಏರ್​ಪೋರ್ಟ್​ನಲ್ಲಿ ನಮಾಜ್​ ಮಾಡಿದ್ದಾರೆ, ತಪ್ಪೇನು? ಅವರು ಮಾಡಿದ್ದು ಪ್ರಾರ್ಥನೆ, ಅವರೇನು ಕೋಲು ಹಿಡಿದುಕೊಂಡು ಹೋಗಿಲ್ಲ. ಪಾಪ ಅವರು ನಮಾಜ್​ ಕೂಡ ಮಾಡಬಾರದಾ. ಅವರ ಶ್ರದ್ಧೆ ನೋಡಿ ನೀವೆಲ್ಲ ಕಲಿತುಕೊಳ್ಳಿ ಎಂದು ಮಾಜಿ ಸಚಿವ ಎಚ್​. ಆಂಜನೇಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು (ಮುಸ್ಲಿಂ) ಎಲ್ಲಿದ್ದರೂ ಅವರ ಮನದ ನೆಮ್ಮದಿಗೆ ಪ್ರಾರ್ಥನೆ ಮಾಡುತ್ತಾರೆ. ಬಸ್​ ಸ್ಟಾ$ಂಡ್​ನಲ್ಲೂ ಮಾಡುತ್ತಾರೆ. ವಿಮಾನ ನಿಲ್ದಾಣದಲ್ಲೂ ಸಾಮೂಹಿಕ ಪ್ರಾರ್ಥನೆಯನ್ನು ಸರಿಯಾಗಿ ಮಾಡಿಕೊಂಡಿದ್ದಾರೆ. ಅವರೇನು, ಇವರಂತೆ ನಾಮ ಹಾಕಿಕೊಂಡು, ಪೂಜೆ ಇಟ್ಕೊಂಡು ತಟ್ಟೆಗೆ ಹಾಕಯ್ಯ ಅಂತ ಕೇಳಿಲ್ಲ. ಅವರು ಮೂರ್ಖರಲ್ಲ, ಮಸೀದಿ ಇಲ್ಲ ಅಂತೇಳಿ ಅಲ್ಲಿ ಮಾಡಿರಬಹುದು.

ಅದರಲ್ಲೂ ನಾವು ಸಣ್ಣತನ ತೋರಿಸಬಾರದು. ಹಿಂದೂಗಳ ಶ್ರದ್ಧೆ ಬೇರೆ, ಅವರ ಶ್ರದ್ಧೆಗಳೇ ಬೇರೆ. ಗಣೇಶನ ಹಬ್ಬದಲ್ಲಿ ಎಣ್ಣೆ ಅಂಗಡಿಗಳು ರಶೋರಶಾಗುತ್ತೆ. ಎಲ್ಲಿದೆ ನಿಮ್ಮ ಶ್ರದ್ಧೆ ಎಂದು ಪ್ರಶ್ನಿಸಿದರು.

ಈಗ ಯಾವುದೋ ಒಂದು ವರ್ಗದ ವಿರುದ್ಧ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಗಣೇಶನ ಹಬ್ಬದಲ್ಲಿ ಯಾವ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಹೈಕ್ಲಾಸ್​ ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗಳು ಹೌಸ್​ ಪುಲ್​ ಆಗಿರುತ್ತವೆ ಎಂದು ಕಿಡಿಕಾರಿದರು.

2028ಕ್ಕೆ ಚರ್ಚೆ ಮಾಡಲಿ...

ನಾಯಕತ್ವ ಬದಲಾವಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರಿಗೆ ಹೆಚ್ಚು ಅವಕಾಶ ಕೊಟ್ಟಿದ್ದೆ ಕಾಂಗ್ರೆಸ್​ ಪಕ್ಷ. ಮಲ್ಲಿಕಾರ್ಜುನ ರ್ಖಗೆ ಒಂದಲ್ಲ ಒಂದು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇದ್ದಾರೆ. 2008ರಲ್ಲಿ ರಾಜ್ಯಾಧ್ಯಕ್ಷರು ಇದ್ದರು. ಅವರ ನೇತೃತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಸ್ಪಷ್ಟ ಬಹುಮತ ಸಿಕ್ಕಿದ್ದರೆ ಆವಾಗ ಅವರೆ ಸಿಎಂ ಆಗುತ್ತಿದ್ದರು. ಈಗ ಸಮರ್ಥ ಸಿ.ಎಂ ಇದ್ದಾರೆ. ಬಡವರು, ಹಿಂದುಳಿದವರ ಮುಖ್ಯಮಂತ್ರಿ ಇದ್ದಾರೆ. ದಲಿತ ಸಿಎಂ ಬಗ್ಗೆ 2028ಕ್ಕೆ ಚರ್ಚೆ ಮಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net