VIDEO: ಟ್ರಂಪ್​ರನ್ನು ಸ್ವಾಗತಿಸಲು ರಸ್ತೆ ಇಕ್ಕೆಲಗಳಲ್ಲಿ ನಿಂತಿರುವ ಜನರು; ಸ್ನೇಹಿತನಿಗಾಗಿ ಏರ್​ಪೋರ್ಟ್​ನಲ್ಲೇ ಕಾಯುತ್ತಿರುವ ಪ್ರಧಾನಿ ಮೋದಿ

Namste Trump 24 Feb 20
Published on

ಅಹಮದಾಬಾದ್​: ಇನ್ನು ಸ್ವಲ್ಪ ಹೊತ್ತಲ್ಲಿ ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್​ ತಲುಪಿದ್ದು, ಏರ್​ಪೋರ್ಟ್​ನಲ್ಲಿಯೇ ಕಾಯುತ್ತಿದ್ದಾರೆ.

ಅಹಮದಾಬಾದ್​ನ ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಜನರು ಸರತಿಸಾಲಿನಲ್ಲಿ ನಿಂತಿದ್ದಾರೆ. ನೃತ್ಯ ಪ್ರದರ್ಶನ ನೀಡುವವರು ಈಗಾಗಲೇ ನೃತ್ಯ ಮಾಡುತ್ತಿದ್ದಾರೆ. ಮೊಟೆರಾ ಸ್ಟೇಡಿಯಂನಲ್ಲೂ ಕೂಡ ಜನರು ತುಂಬಿದ್ದಾರೆ. ಕ್ರೀಡಾಂಗಣದ ವೇದಿಕೆ ಮೇಲೆ ಕೂಡ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗಿದೆ.

ಟ್ರಂಪ್​ ಅವರು ಮಧ್ಯಾಹ್ನ 12.15ಕ್ಕೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಆಶ್ರಮದಲ್ಲಿ ಕೂಡ ಬಿಗಿ ಭದ್ರತೆ ಏರ್ಪಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net