ಹೊಸ ವರ್ಷದ ಆರಂಭದಲ್ಲಿ ನಸುಕಿನ ಜಾವ ವಾಯುವಿಹಾರಕ್ಕೆ ತೆರಳಿದ್ದವರಿಗೆ ಕಾದಿತ್ತು ಭಾರಿ ಶಾಕ್​!

Vayu Vihari 1 jan 20
Published on

ವಿಜಯಪುರ: ಹೊಸ ವರ್ಷ ಆರಂಭದ ಹುರುಪಿನಲ್ಲಿ ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ ವಿಜಯಪುರದ ಜನತೆಗೆ ವ್ಯಕ್ತಿಯೊಬ್ಬನ ಬೆತ್ತಲೆ ದರ್ಶನವಾಗಿ ಮುಜುಗರ ಅನುಭವಿಸಿದ ಘಟನೆ ನಡೆದಿದೆ.

ವಿಜಯಪುರದ ಜಿಲ್ಲಾಡಳಿತ ಕಚೇರಿ‌ ಮುಂಭಾಗದ ಕರಿಮುದ್ದೀಮ ಮಸೀದಿ ಬಳಿ ಅನಾಮಿಕನೊಬ್ಬ ನಸುಕಿನ ನಾಲ್ಕರ ಜಾವಕ್ಕೆ ಬೆತ್ತಲೆಯಾಗಿ ಕುಣಿದಿದ್ದಾನೆ. ಆತ ಹುಚ್ಚನಂತೆ ಕುಣಿದಾಡಿದ್ದನ್ನು ಕಂಡು ವಾಯುವಿಹಾರಿಗಳಿಗೆ ಇರಿಸುಮುರಿಸು ಉಂಟಾಗಿದೆ.

ಮರಾಠಿ ಭಾಷಿಕನಾದ ಅನಾಮಿಕನನ್ನು ಕಂಡು ವಾಯುವಿಹಾರಿಗಳು ಬೆಚ್ಚಿಬಿದ್ದಿದ್ದಾರೆ. ಬಟ್ಟೆ ತೊಟ್ಟುಕೋ ಎಂದು ಹೇಳಿದರೂ ಆರಂಭದಲ್ಲಿ ನಿರಾಕರಿಸಿ, ಬಳಿಕ ಒತ್ತಾಯದ ಮೇರೆಗೆ ರಟ್ಟಿನ ಡಬ್ಬ ಸುತ್ತಿಕೊಂಡಿದ್ದಾನೆ.

ಸ್ಥಳದಲ್ಲಿದ್ದ ವಿಜಯವಾಣಿ ಪ್ರತಿನಿಧಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರಿಂದ ಕೂಡಲೇ ಅನಾಮಿಕ ಅಲ್ಲಿಂದ ಪೇರಿ ಕಿತ್ತಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net