ಪತ್ನಿಯ ಆಸೆ ಪೂರೈಸಲು 'ಸೂಪರ್ ಕಳ್ಳ'ನಾದ ಪತಿ; ಈತ ಕದ್ದಿದ್ದು 111 ಬೈಕ್

Nagpur Police Arrest Man Linked to Series of Motorcycle Thefts
Published on

ಮಹಾರಾಷ್ಟ್ರ: ಪತ್ನಿಯ ಆಸೆ ಪೂರೈಸಲು ಕಷ್ಟಪಟ್ಟು ಕೆಲಸ ಮಾಡಿ ಹಣ ಸಂಪಾದನೆ ಮಾಡಿರುವ ಎಷ್ಟೋ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಾತ್ರ ಪತ್ನಿಯ ಆಸೆ ನೆರವೇರಿಸಲು ಸೂಪರ್​ ಕಳ್ಳನಾಗಿ ಬದಲಾದ ಘಟನೆ ನಾಗ್ಪುರದಲ್ಲಿ ನಡೆದಿದೆ.

ಲಲಿತ್ ಬಂಧಿತ ಆರೋಪಿಯಾಗಿದ್ದಾನೆ. ಬೆಲೆ ಬಾಳುವ ವಸ್ತುಗಳ ಮೇಲೆ ಪತ್ನಿಯ ಮೋಹಕ್ಕೆ ಮನಸೋತು ಕಳ್ಳನಾಗಿದ್ದ ಯುವಕನನ್ನು ಬೈಕ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಅಪರಾಧ ವಿಭಾಗದಿಂದ ಬಂದ ಮಾಹಿತಿ ಪ್ರಕಾರ, ಆರೋಪಿ ಲಲಿತ್ ಈ ಹಿಂದೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾರಾಟ ಮಾಡುತ್ತಿದ್ದ. ಲಲಿತ್ ಪ್ರೇಮ ವಿವಾಹವಾಗಿತ್ತು. ಮದುವೆಯ ನಂತರ ಕುಟುಂಬದ ಆರ್ಥಿಕ ಸಮಸ್ಯೆಗಳು ಹೆಚ್ಚಾದ ಕಾರಣ ಮನೆಯ ಖರ್ಚನ್ನು ನಿಭಾಯಿಸಲು ಮತ್ತು ಹೆಂಡತಿಯ ಹವ್ಯಾಸಗಳನ್ನು ಪೂರೈಸಲು ಲಲಿತ್ ದ್ವಿಚಕ್ರ ವಾಹನಗಳನ್ನು ಕದಿಯಲು ಪ್ರಾರಂಭಿಸಿದರು. ಲಲಿತ್ 12ನೇ ತರಗತಿವರೆಗೆ ಓದಿದ್ದು, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಗ್ರಾಮಾಂತರ ಪ್ರದೇಶದಲ್ಲಿ ಮಾರಾಟ ಮಾಡಲು ಆರಂಭಿಸಿದ್ದ ಎನ್ನಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಪತ್ನಿಯ ದುಬಾರಿ ಹವ್ಯಾಸಗಳನ್ನು ಪೂರೈಸಲು ಪತಿ ಲಲಿತ್ ಕಳ್ಳತನದ ಹಾದಿ ಹಿಡಿದಿದ್ದನು. ಆರೋಪಿಗಳು ನಾಗ್ಪುರ, ಅಕೋಲಾ, ಅಮರಾವತಿ, ಗಡ್ಚಿರೋಲಿ, ಚಂದ್ರಾಪುರ, ಯವತ್ಮಾಲ್, ಭಂಡಾರಾ ಮತ್ತಿತರ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಲಲಿತ್ ಸುಮಾರು ಎರಡು ವರ್ಷಗಳಿಂದ ವಾಹನ ಕಳ್ಳತನದಲ್ಲಿ ಸಕ್ರಿಯರಾಗಿದ್ದ.

111 ಬೈಕ್‌ಗಳನ್ನು ಕದ್ದ ಯುವಕನನ್ನು ನಾಗ್ಪುರ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಯ ಹೆಸರು ಲಲಿತ್ ಗಜೇಂದ್ರ ಭೋಂಗೆ ಎಂಬಾತನಿಂದ ಪೊಲೀಸರು ಸುಮಾರು 77 ಲಕ್ಷ ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ತಲುಪಲು ಪೊಲೀಸರು ಸುಮಾರು 250 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಶೋಧಿಸಬೇಕಾಗಿತ್ತು ಎಂದು ನಾಗ್ಪುರ ಪೊಲೀಸ್ ಕಮಿಷನರ್ ಡಾ.ರವೀಂದ್ರ ಕುಮಾರ್ ಸಿಂಗಲ್ ಅವರು ಮಾಹಿತಿ ನೀಡಿದ್ದಾರೆ.

ವಾಹನ ಕಳವು ಮಾಡಿದ ಬಳಿಕ ಕೆಲ ಬದಲಾವಣೆ ಮಾಡಿ ಗ್ರಾಮಾಂತರ ಪ್ರದೇಶದಿಂದ ಕಳುಹಿಸುತ್ತಿದ್ದ. ನಂತರ ದಾಖಲೆಗಳನ್ನು ಒದಗಿಸುವ ಭರವಸೆಯನ್ನು ನೋಡಿ ಸಿಕ್ಕ ಬೆಲೆಗೆ ಬೈಕ್ ಮಾರಾಟ ಮಾಡುತ್ತಿದ್ದರು. ಡ್ಯೂಪ್ಲಿಕೇಟ್ ಕೀಯಿಂದ ಬೀಗ ಮುರಿದು ವಾಹನ ಕಳ್ಳತನ ಮಾಡುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net