ಪ್ರಿಯತಮೆ ಜತೆಗೆ ಲಾಡ್ಜ್​ನಲ್ಲಿದ್ದ ಪ್ರೇಮಿ ಬೆಳಿಗ್ಗೆಯಾದರೂ ಏಳಲಿಲ್ಲ: ಹಾರಿಹೋಗಿತ್ತು ಪ್ರಾಣಪಕ್ಷಿ, ಕಾರಣ ನಿಗೂಢ..

lodge bed
ಸಾಂದರ್ಭಿಕ ಚಿತ್ರ
Published on

ನಾಗ್ಪುರ್​: ಯುವತಿಯೊಂದಿಗೆ ಲಾಡ್ಜ್​​ಗೆ ತೆರಳಿದ್ದ ಯುವಕ ಏಕಾಏಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಬಳಿ ನಡೆದಿದ್ದು, ಈ ಘಟನೆ ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಕೃಷ್ಣ ರಾಯಭನ್ ಧಂಜೋಡೆ (23) ಮೃತ ಯುವಕನಾಗಿದ್ದು, ಈತ ಅರ್ಜುನಿ-ಮೋರ್ಗಾಂವ್ ತಾಲೂಕಿನ ಜರ್ಫಡಾದ 23 ವರ್ಷದ ಯುವತಿಯೊಂದಿಗೆ ಕೃಷ್ಣ ಅಕ್ರಮ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ. ಇಬ್ಬರೂ ಭಾನುವಾರದಂದು ಭೇಟಿಯಾಗಲು ಬಂದಿದ್ದು ಜತೆಯಾಗಿ ಸುತ್ತಾಡಿ ಕೊನೆಗೆ ಭಂಡಾರಾ ನಗರದ ಲಾಡ್ಜ್‌ವೊಂದರಲ್ಲಿ ತಂಗಿದ್ದರು.

ಬೆಳಿಗ್ಗೆಯಾದ ಕೂಡಲೇ ನಿದ್ದೆಯಿಂದ ಎದ್ದ ಯುವತಿಯು ಆತನನ್ನು ಎಬ್ಬಿಸಲು ಯತ್ನಿಸಿದ್ದು, ಆತ ಏಳಲೇ ಇಲ್ಲ. ಕೂಡಲೇ ದಿಕ್ಕುತೋಚದಂತಾಗಿ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ತಿಳಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆಸ್ಪತ್ರೆಯ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದು, ಈ ಸಂಬಂಧ ಭಂಡಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net