'ಚೈತನ್ಯ ಮೌನಿ..ಅಖಿಲ್ ಹೈಪರ್ ಆ್ಯಕ್ಟಿವ್': ಅಮಲಾ ಕಾಮೆಂಟ್ಸ್​..ವೀಡಿಯೋ ವೈರಲ್​

nagachaithanya
Published on

ಹೈದರಾಬಾದ್​: ನಟ ನಾಗ ಚೈತನ್ಯ ಬಗ್ಗೆ ಅಕ್ಕಿನೇನಿ ಅಮಲಾ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಆತನ ವ್ಯಕ್ತಿತ್ವ, ಹೇಗೆ ನಡೆದುಕೊಳ್ಳುತ್ತಾನೆ ಮತ್ತು ಹೇಗಿರುತ್ತಾನೆ ಎಂಬುದರ ಕುರಿತು ಅವರು ಮಾತನಾಡಿದ್ದು, ಆತನ ಸಹೋದರ ಅಖಿಲ್ ಬಗ್ಗೆಯೂ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿದ್ದು, ವೈರಲ್​ ಆಗಿದೆ.

ಹಿರಿಯ ನಟ ನಾಗಾರ್ಜುನ ಅವರ ಎರಡನೇ ಪತ್ನಿ ಅಮಲಾ ಬಗ್ಗೆ ಪ್ರೇಕ್ಷಕರಿಗೆ ಗೊತ್ತಿರುತ್ತದೆ.. ಅವರ ಮೊದಲ ಪತ್ನಿ ಖ್ಯಾತ ನಿರ್ಮಾಪಕ ರಾಮನಾಯ್ಡು ಅವರ ಪುತ್ರಿ ಲಕ್ಷ್ಮೀ. ಅವರಿಗೆ ಹುಟ್ಟಿದ್ದು ನಾಗ ಚೈತನ್ಯ.

ಅದರ ನಂತರ, ಅವರು ಸ್ವಲ್ಪ ಸಮಯದವರೆಗೆ ಬೇರ್ಪಟ್ಟರು. ನಂತರ ನಾಗಾರ್ಜುನ ನಟಿ ಅಮಲಾ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಅಖಿಲ್ ಜನಿಸಿದ.

ಅಮಲಾಗೆ ನಾಗಚೈತನ್ಯ ಮತ್ತು ಅಖಿಲ್ ಸಮಾನರು ಎಂದು ಹಲವರು ಹೇಳುತ್ತಾರೆ. ತಾಯಿ ಮಮಕಾರವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇತ್ತೀಚೆಗಷ್ಟೇ ಅಮಲಾ ಅವರಿಬ್ಬರ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಾನು ಚೈತನ್ಯನನ್ನು ಬೆಳೆಸಲಿಲ್ಲ. ಅವರ ತಾಯಿ ಅವನನ್ನು ಬೆಳೆಸಿದರು. ಅವನು ಆಗಾಗ ಚೆನ್ನೈನಿಂದ ಮನೆಗೆ ಬರುತ್ತಿದ್ದ. ಅವನು ತುಂಬಾ ಒಳ್ಳೆಯ ಹುಡುಗ. ಅವನು ಅಖಿಲ್‌ಗೆ ಒಳ್ಳೆಯ ಅಣ್ಣನಾಗಿದ್ದ. ಇಬ್ಬರ ನಡುವೆ ಒಳ್ಳೇಯ ಬಾಂಧವ್ಯವಿದೆ. ಜಗಳ ಇಲ್ಲವೇ ಇಲ್ಲ. ಚೈತು ಚಿಕ್ಕವನಿದ್ದಾಗ ಅಖಿಲ್ ಅವನಿಗಾಗಿ ಕಾಯುತ್ತಿದ್ದ. ಅವನು ಬಂದಾಗ ಬಾಲದಂತೆ ಹಿಂಬಾಲಿಸುತ್ತಿದ್ದ ಎಂದಿದ್ದಾರೆ.

ಇನ್ನು ಚೈತನ್ಯ ಹಠಮಾರಿ ಅಲ್ಲ, ಮೌನಿ. ಅವನು ತಂದೆಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಿದ್ದ. ಅಖಿಲ್ ಹೈಪರ್ ಆ್ಯಕ್ಟೀವ್ ಆಗಿದ್ದ. ಹಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಎಂದು ಅಮಲಾ ಹೇಳಿದ್ದಾರೆ.

ಚೈತನ್ಯ ಸಾಯಿ ಪಲ್ಲವಿ ಜೊತೆ ಚಂದು ಮೊಂಡೇಟಿ ನಿರ್ದೇಶನದಲ್ಲಿ ತಾಂಡೇಲ್ ಎಂಬ ಸೀ ಕಾನ್ಸೆಪ್ಟ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅಖಿಲ್ ಸೋಷಿಯೋ ಫ್ಯಾಂಟಸಿ ಸಿನಿಮಾ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net