Naga Chaitanya & sobhita Dhulipala ಮದುವೆ ಫಿಕ್ಸ್​! ಎಲ್ಲಿ, ಯಾವಾಗ ಕಂಪ್ಲೀಟ್ ಡೀಟೇಲ್ಸ್​ ಇಲ್ಲಿದೆ..

Naga Chaitanya & Sobhita Dhulipala
Published on

ಹೈದರಾಬಾದ್​; ಸೌತ್​ ಸ್ಟಾರ್​ ಅಕ್ಕಿನೇನಿ ನಾಗಚೈತನ್ಯ ಮತ್ತು ಸೋಭಿತಾ ಧೂಳಿಪಾಳ(Naga Chaitanya & sobhita Dhulipala) ಎರಡು ವರ್ಷಗಳ ಡೆಂಟಿಂಗ್​ ನಂತರ ಅ.8ರಂದು ಹೈದರಬಾದ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತೆ ಇದೆ. ಶ್ರೀಘ್ರದಲ್ಲಿಯೇ ಇಬ್ಬರೂ ಹಸಮಣೆ ಏರಲಿದ್ದಾರೆ. ಈ ಕುರಿತು ಅಕ್ಕಿನೇನಿ ಕುಟುಂಬ ಅಧಿಕೃತವಾಗಿ ಘೋಷಿಸಿಲ್ಲವಾದರೂ, ಇಬ್ಬರು ವಧು-ವರರಾಗಿ ಹೂವಿನ ಹಾರ ವಿನಿಮಯ ಮಾಡಿಕೊಳ್ಳುವ ಸಮಯ ದೂರ ಇಲ್ಲ. ಇದೇ, ಡಿಸೆಂಬರ್​​ 4ರಂದು ನಾಗಚೈತನ್ಯ ಮತ್ತು ಧೂಳಿಪಾಲ ಮದುವೆಯಾಗಲಿದ್ದಾರೆ. ಮದುವೆ ಮುಹೂರ್ತ ಫಿಕ್ಸ್​ ಆಗಿದ್ದು, ಮುಂಜಾನೆಯೇ ಅಥವಾ ಸಂಜೆ ಎಂಬುವುದು ಅಧಿಕೃತವಾಗಿ ಹೊರಬಂದಿಲ್ತಿಲ ಎಂದು ವರದಿಗಳು ತಿಳಿಸಿವೆ.

ಮದುವೆ ಸ್ಥಳ ಎಲ್ಲಿ ಗೊತ್ತಾ?

ನಾಗಚೈತನ್ಯ, ಸೋಭಿತಾ ಇಬ್ಬರ ಮದುವೆ ವಿದೇಶದಲ್ಲಿ ನಡೆಯಲಿದೆ ಎಂದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಇಬ್ಬರಿಗೂ ನಮ್ಮ ದೇಶದ ರಾಜಸ್ಥಾನ ಸೇರಿದಂತೆ ವಿವಿಧ ನಗರಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿತ್ತು. ಆದರೆ ಕೊನೆಯಾದಾಗಿ ಹೈದರಾಬಾದ್​ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ವರನ ಕುಟುಂಬದ ಸಾಂಪ್ರದಾಯದಂತೆ ಮದುವೆ ನಡೆಯಲಿದೆ.

ಇನ್ನು ಈಗಾಗಲೇ ವಧು ವರ ಕುಟುಂಬಗಳು ಹೈದರಾಬಾದ್​ನಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, ಸೋಭಿತಾ ತವರು ಮನೆ ವಿಶಾಖಪಟ್ಟಂನಲ್ಲಿ ತೆಲುಗು ಸಾಂಪ್ರದಾಯದಂತೆ 'ಪಸುಪು ದಂಚನಂ'(ಹರಿಶಿನಿ ಕಾರ್ಯ) ಮತ್ತು 'ಜಿಲಾಕರ್ರ ಬೆಲ್ಲಂ' ಸೇರಿದಂತೆ ಮದುವೆಯ ಮುನ್ನ ನಡೆಯುವ ವಿವಿಧ ಶಾಸ್ತ್ರಗಳು ನೆರವೇರಿವೆ.

ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ?

ಸೋಭಿತಾ ಅವರ ಕುಟುಂಬದ ಸದಸ್ಯರು ಸೇರಿದಂತೆ ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ. ಜತೆಗೆ ಸಿನಿ ರಂಗದ ಪ್ರಮುಖರು ಮಾತ್ರ ಪಾಲ್ಗೊಳಲಿದ್ದಾರೆ ಎನ್ನಲಾಗಿದೆ.(ಏಜೆನೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net