ಪಿಎಸಿಎಸ್‌ಗೆ 8.62 ಲಕ್ಷ ರೂ. ಲಾಭ

22 nrp 1
Published on

ಎನ್.ಆರ್.ಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22ನೇ ಸಾಲಿನಲ್ಲಿ 8.62 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಆರ್.ಈಶ್ವರ್ ತಿಳಿಸಿದರು.

ಗುರುಭವನದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, 257 ಷೇರುದಾರರಿಗೆ 3.67 ಕೋಟಿ ರೂ. ಕೃಷಿ ಸಾಲ ನೀಡಿದ್ದೇವೆ. 3 ಲಕ್ಷ ರೂ.ವರೆಗೆ ಬಡ್ಡಿರಹಿತ, ನಂತರದ ಹಣಕ್ಕೆ ಬಡ್ಡಿ ಹಾಕಲಾಗುತ್ತದೆ. ಕಳ್ಳಿಕೊಪ್ಪದಲ್ಲಿ 29.70 ಲಕ್ಷ ರೂ. ವೆಚ್ಚದ ಬಹುಪಯೋಗಿ ಕಟ್ಟಡ ಕಾಮಗಾರಿ ಶೇ.80ರಷ್ಟು ಮುಗಿದಿದೆ. ಪಟ್ಟಣ ವ್ಯಾಪ್ತಿಯಲ್ಲಿ ಪಿಗ್ಮಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಟ್ಟಣ ವ್ಯಾಪ್ತಿಯವರಿಗೂ ವಿವಿಧ ಯೋಜನೆಯಡಿ ಸಾಲ ನೀಡುತ್ತೇವೆ. ಬಿಪಿಎಲ್ ಕಾರ್ಡ್ ಹೊಂದಿರುವ ಸ್ವ ಸಹಾಯ ಸಂಘದವರಿಗೆ ಬಡ್ಡಿರಹಿತ ಸಾಲ ನೀಡಲು ಆದೇಶ ಬಂದಿದೆ. ನಮ್ಮ ಸಹಕಾರ ಸಂಘದ ವ್ಯಾಪ್ತಿಯಲ್ಲಿ 61 ಮಹಿಳಾ ಸ್ವಸಹಾಯ ಸಂಘಗಳಿದ್ದು 30 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದಾರೆ ಎಂದರು.

ಉಪಾಧ್ಯಕ್ಷೆ ಸವಿತಾ ರತ್ನಾಕರ್, ನಿರ್ದೇಶಕರಾದ ಎಂ.ಟಿ.ಕುಮಾರ್, ಎಚ್.ಸಿ.ನಾಗೇಂದ್ರ, ಎಸ್.ಎನ್.ಸುಬ್ಬಯ್ಯ ಗೌಡ, ಇ.ಎಂ.ವೇದಾವತಿ, ಗಿರೀಶ್ ಕಾರ್ತಿಕೇಯನ್, ತಿಪ್ಪೇಶ, ವಿ.ಎಸ್.ಹೂವಣ್ಣ, ಎ.ಬಿ.ಪ್ರಶಾಂತ್, ಕೆ.ಟಿ.ಮಂಜುನಾಥ, ಬಿ.ಕೆ.ಜಾನಕಿರಾಂ, ಸುಬ್ಬಣ್ಣ, ಎಲ್.ನಾಗರಾಜ್, ಸಿಇಒ ಎನ್.ಟಿ.ಶ್ರೀಕಾಂತ್, ಮಾಜಿ ಅಧ್ಯಕ್ಷ ಚರಿಯನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net