ಪೌರಕಾರ್ಮಿಕರಿಗೆ ನೋಟಿನ ಹಾರ ಹಾಕಿ ಸನ್ಮಾನ ಮಾಡಿದ ಮಾಜಿ ಮೇಯರ್

mysore april 14
Published on

ಮೈಸೂರು: ಟೆರಿಷಿಯನ್​ ಕಾಲೇಜು ಬಳಿ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರಿಗೆ ಮಾಜಿ ಮೇಯರ್​ ಸಂದೇಶ್​ ಸ್ವಾಮಿ ನೋಟಿನ ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

ಅಂಬೇಡ್ಕರ್​ ಜಯಂತಿ ಅಂಗವಾಗಿ ಹಾಗೂ ಕರೊನಾ ವೈರಸ್​ ಹರಡುತ್ತಿರುವ ಸಂದರ್ಭದಲ್ಲಿ ನಗರದ ಸ್ವಚ್ಛತೆ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ಅವರು 50 ರೂಪಾಯಿ ಮುಖಬೆಲೆಯ ನೋಟಿನ ಹಾರ ಹಾಕಿ ಹಾಗೂ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.

ನಂತರ ಮಾತನಾಡಿದ ಅವರು, ಇಂದು ಅಂಬೇಡ್ಕರ್​ ಜಯಂತಿ. ಪೌರ ಕಾರ್ಮಿಕರು ಸಮಾಜದಲ್ಲಿ ಎಲ್ಲರಂತೆ ಬದುಕಬೇಕು ಎಂದು ಕನಸು ಕಂಡಿದ್ದ ಅಂಬೇಡ್ಕರ್​ ಅವರನ್ನು ಇಂದು ನಾವು ಸ್ಮರಿಸಬೇಕು. ದಲಿತರು, ಹಿಂದುಳಿದವರ ಪರವಾಗಿ ಕಾನೂನು ರಚಿಸಿದರು. ಸಂಘಟನೆ ಹಾಗೂ ಶಿಕ್ಷಣದಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ ಎಂದು ನಂಬಿದ್ದರು. ಇಂತ ನಾಯಕನ ಸ್ಮರಣೆ ಕೇವಲ ಆಚರಣೆಯಾಗಬಾರದು. ಅವರ ಆದರ್ಶನಗಳನ್ನು ಅನುಸರಿಸಬೇಕು. ಸಂವಿಧಾನದ ಆಶಯ ಇನ್ನು ಈಡೇರಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿ ಮುಂದುವರೆಯುವುದನ್ನು ಯಾರು ಇಷ್ಟಪಡುವುದಿಲ್ಲ. ಉತ್ತಮ ಶಿಕ್ಷಣ ಕೊಡಿಸಿ ಅವರು ಒಳ್ಳೆಯ ಉದ್ಯೋಗ ಪಡೆಯುವಂತೆ ಮಾಡಬೇಕು ಎಂದು ನುಡಿದರು.

ಬಿಜೆಪಿ ಯುವ ಮುಖಂಡ ಲೋಹಿತ್ ,ಉದ್ಯಮಿ ಅಪೂರ್ವ ಸುರೇಶ್ ,ಜೀವನ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net