ಮೈಸೂರು ವಿಭಾಗ ತಂಡದ ಗೆಲುವಿನ ಓಟ

10khokho
Published on



ಸಾಂಘಿಕ ಪ್ರದರ್ಶನ ಮುಂದುವರಿಸಿರುವ ಮೈಸೂರು ವಿಭಾಗ ತಂಡವು ರಾಜ್ಯ ಮಟ್ಟದ ‘ದಸರಾ ಕ್ರೀಡಾಕೂಟ ಸಿಎಂ ಕಪ್’ನ ಪುರುಷರ ಖೋಖೋ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ಬೆಳಗಾವಿ ವಿರುದ್ಧದ ಲಿಂಗ್ ಪಂದ್ಯದಲ್ಲಿ 19-14 ಅಂಕಗಳಿಂದ ಭರ್ಜರಿ ಜಯ ಸಾಧಿಸಿತು. ಆದರೆ, ರೋಚಕತೆಯಿಂದ ಕೂಡಿದ್ದ ಮತ್ತೊಂದು ಲೀಗ್ ಪಂದ್ಯದಲ್ಲಿ ಮೈಸೂರು ವಿಭಾಗ ತಂಡವು 15-15 ಅಂಕಗಳಿಂದ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ ಡ್ರಾ ಸಾಧಿಸಿತು.
ಮತ್ತೊಂದು ಲೀಗ್ ಪಂದ್ಯದಲ್ಲಿ ಬೆಂಗಳೂರು ನಗರ ವಿಭಾಗ ತಂಡವು 15-4 ಅಂಕಗಳಿಂದ ಕಲಬುರಗಿ ಜಯ ಸಾಧಿಸಿದರೆ, ಬೆಂಗಳೂರು ಗ್ರಾಮಾಂತರ ತಂಡವು 16-11 ಅಂಕಗಳಿಂದ ಕಲಬುರಗಿ ತಂಡವನ್ನು ಮಣಿಸಿತು.
ಎರಡು ಜಯ: ಖೋ ಖೋ ಮಹಿಳಾ ವಿಭಾಗದಲ್ಲಿ ಮೈಸೂರು ವಿಭಾಗ ತಂಡವು ಎರಡು ಲೀಗ್‌ಗಳಲ್ಲಿ ಜಯ ಸಾಧಿಸಿ ಪ್ರಾಬಲ್ಯ ಮುಂದುವರೆಸಿತು. ಮೊದಲ ಪಂದ್ಯದಲ್ಲಿ 18-3 ಅಂಕಗಳಿಂದ ಬೆಳಗಾವಿ ತಂಡವನ್ನು ಸೋಲಿಸದ ಮೈಸೂರು ತಂಡ, ಎರಡನೇ ಪಂದ್ಯದಲ್ಲಿ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 15-2 ಅಂಕಗಳಿಂದ ಭರ್ಜರಿ ಜಯ ಸಾಧಿಸಿತು. ಇನ್ನು ದಿನದ ಮೊದಲ ಲೀಗ್‌ನಲ್ಲಿ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 11-7 ಅಂಕಗಳಿಂದ ಜಯ ಸಾಧಿಸಿದ್ದ ಕಲಬುರಗಿ ತಂಡವು ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ನಗರ ತಂಡದ ವಿರುದ್ಧ 1 ಅಂಕಗಳಿಂದ ಸೋಲು ಅನುಭವಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net