ಸಂಘದ ಅಭಿವೃದ್ಧಿಗೆ ಗುಣಮಟ್ಟದ ಹಾಲು ಪೂರೈಸಿ

24BTP01
ಹಸುವಿನಕಾವಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯನ್ನು ಅತಿಥಿಗಳು ಉದ್ಘಾಟಿಸಿದರು. ಎಚ್.ಎಂ. ಮೈಲಾರಪ್ಪ, ಸತೀಶ್, ನಾಗರಾಜು, ಬಿ.ಕೆ ವಿಜಯ್, ಮಂಜೇಗೌಡ, ಮಂಜುನಾಥ್, ಲಕ್ಷ್ಮಣ ನಾಯಕ, ಚಂದ್ರಶೆಟ್ಟಿ, ರೇವಣ್ಣ, ಪುಟ್ಟರಾಜು, ಮಲ್ಲೇಶ್, ಅನಿತಾ, ಜಯಮ್ಮ, ಎಚ್.ಎ.ಅನಿಲ್ ಕುಮಾರ್, ಎಚ್.ಎಲ್.ಶಿವಕುಮಾರ ಇದ್ದರು.
Published on

ಬೆಟ್ಟದಪುರ: ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹೆಚ್ಚಿನ ಆದಾಯಗಳಿಸಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಹಸುವಿನಕಾವಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ ಮೈಲಾರಪ್ಪ ಹೇಳಿದರು.


ಡೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿರುವ ಸಹಕಾರ ಸಂಘವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.


ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಮಾತನಾಡಿ, ಸಂಘ 2022-23ನೇ ಸಾಲಿನಲ್ಲಿ 76,300 ರೂ. ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.


ಗ್ರಾಪಂ ಸದಸ್ಯ ಗೋವಿಂದೇಗೌಡ, ಸಂಘದ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಬಿ.ಕೆ.ವಿಜಯ್, ಮಂಜೇಗೌಡ, ಮಂಜುನಾಥ್, ಲಕ್ಷ್ಮಣನಾಯಕ, ಚಂದ್ರಶೆಟ್ಟಿ, ರೇವಣ್ಣ, ಪುಟ್ಟರಾಜು, ಮಲ್ಲೇಶ್, ಅನಿತಾ, ಜಯಮ್ಮ, ಕಾರ್ಯದರ್ಶಿ ಎಚ್.ಎ.ಅನಿಲ್ ಕುಮಾರ್, ಸಿಬ್ಬಂದಿ ಎಚ್.ಎಲ್.ಶಿವಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net