ಮೈ-ಬೆಂ ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಇಳಿಮುಖ; ವೇಗಮಿತಿ ಹೆಚ್ಚಿಸಲು ಚಿಂತನೆ

Bangalore Express Way
Published on

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿದ್ದು ಒಂದಕಿಗೆ ಸಾವಿನ ಸಂಖ್ಯೆ ಇಳಿದಿದೆ.

ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಅಪಘಾತ ಸಂಖ್ಯೆ ಇಳಿಕೆಯಾಗಿದೆ. ಬೆಂಗಳೂರಿನಿಂದ ಮೈಸೂರಿನವರೆಗೆ ಮೇ ತಿಂಗಳೊಂದರಲ್ಲೇ 29 ಮಂದಿ ಸಾವಿಗೀಡಾಗಿದ್ದರು. ಜೂನ್ ತಿಂಗಳಿನಲ್ಲಿ 28ಮಂದಿ ಸಾವನ್ನಪ್ಪಿದ್ದು ಜುಲೈನಲ್ಲಿ ಕೇವಲ 8ಕ್ಕೆ ಸಾವಿನ ಸಂಖ್ಯೆ ಇಳಿದಿತ್ತು.

ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು, ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಅಪಘಾತ ಸಂಖ್ಯೆ ಇಳಿಮುಖ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಮತ್ತಷ್ಟು ಇಳಿಮುಖ ಆದರೆ ವೇಗ ಮಿತಿ ಏರಿಕೆಗೆ ಚಿಂತನೆ ನಡೆಸಲಾಗುತ್ತಿದೆ. ಪ್ರತಿ ಗಂಟೆಗೆ 100 ರಿಂದ 120ಕಿ.ಮೀಗೆ ಏರಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net