

Nagini: ರಾತ್ರಿ ಸಮಯದಲ್ಲಿ ನನ್ನ ಹೆಂಡತಿ 'ನಾಗಿಣಿ' ಆಗಿ ಬದಲಾಗುತ್ತಾಳೆ. ಇದರಿಂದ ನಾನು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗೆ ದೂರು ನೀಡಿದ ಅಸಾಮಾನ್ಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಕ್ಟೋಬರ್ 4 ರಂದು ನಡೆದ 'ಸಮಾಧಾನ್ ದಿವಸ್' (ಸಾರ್ವಜನಿಕ ಕುಂದುಕೊರತೆ ಪರಿಹಾರ ದಿನ) ಸಂದರ್ಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಆನಂದ್ ಅವರ ಮುಂದೆ ಈ ಪ್ರಸಂಗ ನಡೆದಿದೆ.
ಮಹ್ಮದಾಬಾದ್ ತಹಸಿಲ್ನ ಲೋಧಾಸಾ ಗ್ರಾಮದ ದೂರುದಾರ ಮೆರಾಜ್ ಈ ಘಟನೆಯನ್ನು ಜಿಲ್ಲಾಧಿಕಾರಿಗೆ ಹೇಳಿಕೊಂಡಿದ್ದಾನೆ. ತನ್ನ ಪತ್ನಿ ನಾಸಿಮುನ್ ಮಾನಸಿಕವಾಗಿ ಅಸ್ಥಿರಳಾಗಿದ್ದು, ರಾತ್ರಿ ಸಮಯದಲ್ಲಿ "ನಾಗಿಣಿ" (ಹೆಣ್ಣು ಸರ್ಪ) ನಂತೆ ನಟಿಸುತ್ತಾ, ಸಿಳ್ಳೆ ಹೊಡೆಯುತ್ತಾ ಮತ್ತು ಹೆದರಿಸುತ್ತಾ ಕಳೆಯುತ್ತಾಳೆ ಎಂದು ಮೆರಾಜ್ ಆರೋಪಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಕುಂದುಕೊರತೆ ಪರಿಹಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಅಧಿಕಾರಿಗಳು ಈ ಅಸಾಮಾನ್ಯ ದೂರಿನಿಂದ ಆಶ್ಚರ್ಯಚಕಿತರಾದರು ಎಂದು ವರದಿಯಾಗಿದೆ. (ಏಜೆನ್ಸೀಸ್)