ಸರ್ಕಾರವನ್ನೇ ಬೀಳಿಸಿದ್ದೆ, ಸಿಡಿ ಯಾವ ಲೆಕ್ಕ? ನಾಳೆಯಿಂದ ನನ್ನ ಆಟ ಶುರು ಎಂದ ಜಾರಕಿಹೊಳಿ

jarakiholi
Published on

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಲಿಖಿತ ದೂರು ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾಳೆಯಿಂದ ನಮ್ಮ ಆಟ ಶುರು ಎಂದು ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅವರಿಗೆ ಕೊನೆ ಅಸ್ತ್ರ ಇತ್ತು. ನಾಳೆ ನಮ್ಮ ಆಟ ಶುರು ಆಗಲಿದೆ. ಇಂತ ಹತ್ತು ದೂರು ಬಂದ್ರು ನಾನು ಎದುರಿಸುತ್ತೇನೆ. ಅಂದಿನ ಜೆಡಿಎಸ್ ಕಾಂಗ್ರೆಸ್​ ಸರ್ಕಾರವನ್ನೇ ತಗದಿದ್ದೇನೆ. ನನಗೆ ಇದ್ಯಾವ ಲೆಕ್ಕ ಎಂದಿದ್ದಾರೆ.

ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನಾನು ತಪ್ಪಿದ್ರೆ ಜೈಲಿಗೆ ಹೋಗುತ್ತೇನೆ. ಪೊಲೀಸ್ ಆಯುಕ್ತರಿಗೆ ಮನವಿ ಮಾಡ್ತೀನಿ. ತಪ್ಪಿದ್ರೆ ಪೊಲೀಸ್ ಸ್ಟೇಷನ್ ಬರ್ತೀನಿ. ನನ್ನ ತಪ್ಪಿದ್ರೆ ನಾನೇ ನೇಣು ಹಾಕಿಕೊಳ್ತೀನಿ. ನಾನು ಸಿಎಂಗೆ, ಗೃಹಸಚಿವರಿಗೆ ಇದರ ಹಿಂದೆ ಯಾರಿದ್ದಾರೆ ಹೇಳಿದ್ದೀನಿ. ಅವರ ಕೊನೆಯ ಅಸ್ತ್ರ ಮುಗಿದಿದೆ. ನನ್ನ ಆಟ ಈಗ ಶುರುವಾಗಿದೆ. ಇದೆಲ್ಲ ಷಡ್ಯಂತ್ರ. ಈ ರೀತಿ ಬರಲಿದೆ ಅನ್ನೋದು ನನಗೆ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ.

ಮೈ ತೋರಿಸಿಕೊಂಡವಳು ಅವಳು. ಅದು ಬಿಟ್ಟು ನನ್ನ ವಿರುದ್ಧ ಟಿವಿ ಚಾನೆಲ್​​ಗಳಲ್ಲಿ ಆಂಕರ್​​ಗಳು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು ಎಂದು ರಮೇಶ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net