ಮುಸ್ಲಿಂ ಮಹಿಳೆಯರ ಪಾಕ್ ಪ್ರೇಮ!

7-680bd2f0ec15e
Published on

ಕಲಬುರಗಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ 26 ಅಮಾಯಕರ ಬಲಿ ಪಡೆದಿರುವ ಉಗ್ರರ ದುಷ್ಕೃತ್ಯ ಖಂಡಿಸಿ ಬಜರಂಗದಳ ಕಾರ್ಯಕರ್ತರು ಶುಕ್ರವಾರ ನಗರದ ವಿವಿಧೆಡೆ ರಸ್ತೆ ಮೇಲೆ ಪಾಕಿಸ್ತಾನ ಧ್ವಜ ಅಂಟಿಸಿ ಆಕ್ರೋಶ ಹೊರಹಾಕಿದರು. ಮತ್ತೊಂದೆಡೆ ನ್ಯಾಷನಲ್ ಚೌಕ್ ಬಳಿ ರಸ್ತೆಗೆ ಅಂಟಿಸಿದ್ದ ಪಾಕಿಸ್ತಾನದ ಧ್ವಜಗಳನ್ನು ಮುಸ್ಲಿಂ ಮಹಿಳೆಯರು ಕಿತ್ತೆಸೆದರು.

ಇದಕ್ಕೆ ಪ್ರತಿಕ್ರಿಯಿಸಿದ ಬಜರಂಗದಳ ಕಾರ್ಯಕರ್ತರು ಪಾಕ್ ಧ್ವಜದ ಬಗ್ಗೆ ಇವರಿಗೇಕೆ ಇಷ್ಟು ಕಾಳಜಿ ಎಂದು ಪ್ರಶ್ನಿಸಿದರು. ನಗರದಲ್ಲಿ ಪ್ರತಿಭಟನೆ ಮಾಡಬೇಕಾದರೆ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ. ಆದರೆ ಪಾಕಿಸ್ತಾನ ಧ್ವಜ ಅಂಟಿಸಲು ಅನುಮತಿ ಪಡೆದಿರಲಿಲ್ಲ. ಇದರಿಂದ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಯಾರು ಧ್ವಜ ಅಂಟಿಸಿದ್ದಾರೆ ಎಂದು ಪೊಲೀಸ್ ಸೇರಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು. ಕೆಲಹೊತ್ತಿನ ಬಳಿಕ ಬಜರಂಗದಳ ಕಾರ್ಯಕರ್ತರು ಅಂಟಿಸಿರುವ ವಿಷಯ ತಿಳಿದಿದ್ದು, ಆರು ಜನರನ್ನು ಬ್ರಹ್ಮಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net