ಮುಸ್ಲಿಂ ಮಹಿಳೆ ತಮ್ಮ ನವಜಾತ ಶಿಶುವಿಗೆ 'ರಣವಿಜಯ' ಎಂದು ಹಿಂದು ಹೆಸರಿಡಲು ಕಾರಣವಾಯ್ತು ಕರೊನಾ ಕರ್ಫ್ಯೂ...!

Woaman 26 March 20
Published on

ಬರೇಲಿ: ಮುಸ್ಲಿಂ ಮಹಿಳೆಯೋರ್ವರು ತಮ್ಮ ನವಜಾತ ಗಂಡು ಮಗುವಿಗೆ ಹಿಂದು ಹೆಸರನ್ನು ಇಡಲು ಕರೊನಾ ಕರ್ಫ್ಯೂ ಕಾರಣವಾಗಿದೆ.

ಈಗ ಎಲ್ಲೆಲ್ಲೂ ಕರೊನಾ ಭೀತಿ. ಮಾ.24ರಿಂದ ಇಡೀ ದೇಶವೇ ಲಾಕ್​ಡೌನ್ ಆಗಿದೆ. ಹಾಗಾಗಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಈ ಮಧ್ಯೆ ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಮಹಿಳೆಯೋರ್ವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಅವರ ಪತಿ ನೊಯ್ಡಾದಲ್ಲಿ ಇದ್ದರು. ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಪತಿಯೇ ಹೋಗಬೇಕಿತ್ತು. ಆದರೆ ಲಾಕ್​ಡೌನ್​ ಮಧ್ಯೆ ಬರೇಲಿಗೆ ಹೋಗಲಾಗದೆ ಕಷ್ಟಪಡುತ್ತಿದ್ದ ಆ ವ್ಯಕ್ತಿಗೆ ನೊಯ್ಡಾದ ಅಡಿಷನಲ್ ಡಿಸಿಪಿ ಕುಮಾರ್​ ರಣವಿಜಯ​ ಎಂಬುವರು ಸಹಾಯ ಮಾಡಿದರು.

ಅಡಿಷನಲ್​ ಡಿಸಿಪಿ ಸಹಾಯದಿಂದ ಬರೇಲಿಗೆ ಹೋದ ವ್ಯಕ್ತಿ, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಹೆರಿಗೆಯಾಗಿ ಗಂಡುಮಗುವೂ ಜನಿಸಿತು. ಪೊಲೀಸ್ ಅಧಿಕಾರಿ ರಣವಿಜಯ್​ ಅವರ ಉಪಕಾರ ಸ್ಮರಿಸಿದ ಮುಸ್ಲಿಂ ಮಹಿಳೆ ತನ್ನ ಮಗುವಿಗೆ ರಣವಿಜಯ​ ಎಂದೇ ಹೆಸರನ್ನಿಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net