'ಕೆಲವೇ ದಿನಗಳಲ್ಲಿ ನನ್ನ ಫೋನ್ ಸಂಖ್ಯೆ ಬಳಸುವುದನ್ನು ನಿಲ್ಲಿಸ್ತೇನೆ'..ಹೀಗೆಂದಿದ್ದೇಕೆ 'X'ಟ್ವಿಟರ್ ಮುಖ್ಯಸ್ಥ ಮಸ್ಕ್? ​

mask
Published on

ನವದೆಹಲಿ: 'X'(ಟ್ವಿಟರ್) ಮುಖ್ಯಸ್ಥ ಎಲಾನ್ ಮಸ್ಕ್ ಹೊಸದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. 'ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಫೋನ್ ಸಂಖ್ಯೆ ಬಳಸುವುದನ್ನು ನಿಲ್ಲಿಸುತ್ತೇನೆ. ಮೆಸೇಜ್​, ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಕಳುಹಿಸಲು 'X' ಅನ್ನು ಮಾತ್ರ ಬಳಸುತ್ತೇನೆ ಎಂದಿದ್ದಾರೆ

'X'(ಟ್ವಿಟರ್)ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರಚಾರ ಮಾಡುವ ಪ್ರಯತ್ನದ ಭಾಗವಾಗಿ ಈ ಪ್ರಕಟಣೆಯು ಮಸ್ಕ್‌ನಿಂದ ಬಂದಿರುವಂತೆ ತೋರುತ್ತಿದೆ.

'ಎಕ್ಸ್' ಪ್ಲಾಟ್‌ಫಾರ್ಮ್ ಅನ್ನು 'ಎವೆರಿಥಿಂಗ್ ಆಪ್' ಆಗಿ ಪರಿವರ್ತಿಸುವ ಭಾಗವಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ತಿಳಿಸಿದ್ದರು. ಇದರ ಸಹಾಯದಿಂದ ನೀವು ಫೋನ್ ಸಂಖ್ಯೆ ಇಲ್ಲದೆಯೇ 'X' ನಲ್ಲಿ ಕರೆಗಳನ್ನು ಮಾಡಬಹುದು. Android, iOS, Mac, PC ಈ ಕರೆ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net