‘ಎಕ್ಸ್’ ಒಡೆಯಮತ್ತು ಮೆಟಾ ಮಾಲೀಕರ ಕೇಜ್ ಫೈಟ್! ಕಾದಾಟಕ್ಕೂ ಮೊದಲು ಕಾಲೆಳೆಯುವ ಕಿಲಾಡಿಗಳು...

elon musk
Published on

ನವದೆಹಲಿ: ಎಲೋನ್ ಮಸ್ಕ್ ಭಾನುವಾರ ಮಾರ್ಕ್ ಜುಕರ್ಬರ್ಗ್ ಅವರೊಂದಿಗಿನ ತಮ್ಮ ಸಂಭಾವ್ಯ ಕೇಜ್‍ ಫೈಟ್‍ನ ವಿವರಗಳನ್ನು ಹಂಚಿಕೊಂಡಿದ್ದು, ನಂತರ ಅದನ್ನು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಸ್ಟ್ರೀಮ್ ಮಾಡಲಾಗುವುದು ಎಂದು ಘೋಷಿಸಿದರು. ಇಷ್ಟಕ್ಕೇ ಥ್ರೆಡ್ಸ್ ಮೂಲಕ ಎಲಾನ್‍ ಮಸ್ಕ್ ಅವರ ಮೆಟಾ ಮಾಲೀಕ ಕಾಲೆಳೆದಿದ್ದಾರೆ.

"ಝಕ್ ವರ್ಸಸ್ ಮಸ್ಕ್ ಫೈಟ್ ಅನ್ನು ಎಕ್ಸ್ ಅಥವಾ ಟ್ವಿಟರ್‍ಅಲ್ಲಿ ನೇರ ಪ್ರಸಾರ ಮಾಡಲಾಗುವುದು" ಎಂದು ಮಸ್ಕ್ 'ಎಕ್ಸ್' ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ನಲ್ಲಿ ಬರೆದಿದ್ದರು. ಈ ಸಂದರ್ಭ ಅವರು ಬರುವ ಎಲ್ಲಾ ಆದಾಯವನ್ನು ನಿವೃತ್ತ ಸೈನಿಕರಿಗಾಗಿ ದಾನ ನೀಡಲಾಗುವುದು" ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಜುಕರ್ಬರ್ಗ್ ಮಸ್ಕ್ ಅವರ ಪೋಸ್ಟಿನ ಸ್ಕ್ರೀನ್ಶಾಟ್ ಅನ್ನು 'ಥ್ರೆಡ್ಸ್' ನಲ್ಲಿ ಹಂಚಿಕೊಂಡಿದ್ದು "ನಾವು ದಾನಕ್ಕಾಗಿ ಹಣವನ್ನು ಸಂಗ್ರಹಿಸುವುದಾದರೆ ಹೆಚ್ಚು ವಿಶ್ವಾಸಾರ್ಹ ವೇದಿಕೆಯನ್ನು ಬಳಸಬೇಕಲ್ಲವೇ?" ಎಂದು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಮಸ್ಕ್ ಟ್ವಿಟರ್‍ ಜವಾಬ್ದಾರಿ ವಹಿಸಿಕೊಂಡಾಗಿನಿಂದ 'ಎಕ್ಸ್' ಎದುರಿಸುತ್ತಿರುವ ಸಮಸ್ಯೆಗಳ ಸರಣಿಯನ್ನು ಜುಕರ್ಬರ್ಗ್ ಉಲ್ಲೇಖಿಸಿದರು. ಇವುಗಳಲ್ಲಿ ಭಾರಿ ಪ್ರಮಾಣದ ವಜಾ, ಈ ಹಿಂದೆ ಅಮಾನತುಗೊಂಡ ಬಲಪಂಥೀಯರ ಖಾತೆಗಳನ್ನು ಪುನಃಸ್ಥಾಪಿಸುವುದು, ಪ್ಲಾಟ್ಫಾರ್ಮ್ನಲ್ಲಿ ಗೊಂದಲಮಯ ಪರಿಶೀಲನಾ ಬ್ಯಾಡ್ಜ್ ವ್ಯವಸ್ಥೆ ಮುಂತಾದವು ಸೇರಿವೆ. ಇದು ಹಲವಾರು ಜಾಹೀರಾತುದಾರರು ಬೇರೆಡೆಗೆ ತಿರುಗಲು ಕಾರಣವಾಯಿತು.

ಏನಿದು ಕೇಜ್ ಫೈಟ್?

ಜೂನ್ ತಿಂಗಳಲ್ಲಿ ಥ್ರೆಡ್ಸ್ ಬಿಡುಗಡೆಯ ಸುದ್ದಿ ಆನ್ ಲೈನ್ ನಲ್ಲಿ ಕಾಣಿಸಿಕೊಂಡಾಗ ಈ ವಿಚಾರ ತಮಾಷೆಯಾಗಿ ಪ್ರಾರಂಭವಾಯಿತು. ಜಕರ್ಬರ್ಗ್ ಅವರ ಹೇಳಿಕೆಯನ್ನು ಟೀಕಿಸಿದ್ದ ಮಸ್ಕ್, "ಭೂಮಿಯು ಝಕ್ ಅವರ ಹೆಬ್ಬೆರಳಿನ ಕೆಳಗೆ ಪ್ರತ್ಯೇಕವಾಗಿ ಇರಲು ಕಾಯಲು ಸಾಧ್ಯವಿಲ್ಲ ಎಂದಿದ್ದರು.

ಆಗ ಝಕ್‍ ಅಭಿಮಾನಿಗಳು ಮಿಶ್ರ ಸಮರ ಕಲೆಗಳ ಒಂದು ರೂಪವಾದ ಬ್ರೆಜಿಲಿಯನ್ ಜಿ-ಜುತ್ಸುನಲ್ಲಿ ಝಕರ್ಬರ್ಗ್ ಪರಿಣಿತಿ ಹೊಂದಿರುವುದರಿಂದ ಜಾಗರೂಕರಾಗಿರಿ ಎಂದು ಬಳಕೆದಾರರು ಹೇಳಿದ್ದರು. ಅದಕ್ಕೆ ಮಸ್ಕ್, "ಅವರು ರೆಡಿ ಆಗಿದ್ದರೆ ನಾನು ಕೇಜ್ ಫೈಟ್‍ಗೆ ಸಿದ್ಧನಿದ್ದೇನೆ." ಎಂದಿದ್ದರು.

ಜುಕರ್ಬರ್ಗ್ ಅವರ ಮೆಟಾ ಜುಲೈ ಆರಂಭದಲ್ಲಿ ತನ್ನ ಟ್ವಿಟರ್ ತರಹದ ಥ್ರೆಡ್ಸ್ ಪ್ಲಾಟ್ಫಾರ್ಮ್ ಅನ್ನು ಪ್ರಾರಂಭಿಸಿತು, ಇದು ಇಬ್ಬರು ಶತಕೋಟ್ಯಾಧಿಪತಿಗಳನ್ನು ಪರಸ್ಪರ ನೇರ ಸ್ಪರ್ಧೆಗೆ ಇಳಿಯುವಂತೆ ಮಾಡಿತ್ತು. ರಾಜಕೀಯದಿಂದ ಕೃತಕ ಬುದ್ಧಿಮತ್ತೆಯವರೆಗಿನ ವಿಷಯಗಳ ಬಗ್ಗೆ ಎರಡು ಟೆಕ್ ದೈತ್ಯರು ವರ್ಷಗಳಿಂದ ಜಗಳವಾಡಿದ್ದಾರೆ.

ಮಸ್ಕ್ ಕಳೆದ ವರ್ಷ ಅಕ್ಟೋಬರ್ನಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಅನ್ನು 44 ಬಿಲಿಯನ್ ಡಾಲರ್ಗೆ ಖರೀದಿಸಿ ಅದನ್ನು "ಲಾಭದಾಯಕ" ಮಾಡುವ ಪ್ರಯತ್ನದಲ್ಲಿ ಸರಣಿ ಬದಲಾವಣೆಗಳನ್ನು ಪರಿಚಯಿಸಿದ್ದಾರೆ; ಆದಾಗ್ಯೂ ಥ್ರೆಡ್ಸ್ ನ ಬಿಡುಗಡೆಯು ಅದರ ಸವಾಲುಗಳನ್ನು ಹೆಚ್ಚಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net