Ilaiyaraaja: ಇಳಯರಾಜ ಅವ್ರನ್ನ ಗರ್ಭಗುಡಿಯಿಂದ ಹೊರಗೆ ಕಳುಹಿಸಿದ ದೇವಸ್ಥಾನ ಆಡಳಿತಾಧಿಕಾರಿಗಳು!

Ilaiyaraaja
Published on

Ilaiyaraaja: ಖ್ಯಾತ ಸಂಗೀತ ಸಂಯೋಜಕ ಮತ್ತು ರಾಜ್ಯಸಭಾ ಸಂಸದ ಇಳಯರಾಜ ಅವರು ತಮಿಳುನಾಡಿನ ಪ್ರಸಿದ್ಧ ದೇವಾಲಯದ ಪವಿತ್ರ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸಲು ಮುಂದಾದಗ ಅಲ್ಲಿಂದ ಹೊರಬರುವಂತೆ ದೇವಸ್ಥಾನ ಆಢಳಿತ ಮಂಡಳಿ ಹೇಳಿದೆ ಎನ್ನುವ ಸುದ್ದಿಯೊಂದು ಹಬ್ಬಿದೆ.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಮಾರ್ಗಶಿರ ಮಾಸದ ಮೊದಲ ದಿನವಾದ ಇಂದು ಮುಂಜಾನೆ ತಮಿಳುನಾಡಿನ ವಿರುದು ನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರು ಆಂಡಾಳ್ ಮಾತಾ ದೇವಸ್ಥಾನಕ್ಕೆ ತೆರಳಿದರು. ಅವರು ಗರ್ಭಗುಡಿಯನ್ನು ಪ್ರವೇಶಿಸಿದರು. ಆದರೆ ದೇವಸ್ಥಾನದ ಆಡಳಿತಾಧಿಕಾರಿಗಳು ಇಳಯ ರಾಜ ಅವರಿಗೆ ಗರ್ಭಗುಡಿಯ ಹೊರಗೆ ಹೋಗುವಂತೆ ಸಲಹೆ ನೀಡಿದ್ದಾರೆ.

ಇಳಯರಾಜ ದೇವಸ್ಥಾನದ ಅರ್ಥ ಮಂಟಪದ ಮೆಟ್ಟಿಲುಗಳ ಬಳಿ ನಿಂತು ಪೂಜೆ ಸಲ್ಲಿಸಿದರು. ಇಳಯರಾಜ ಅವರ ‘ದಿವ್ಯ ಪಾಶುರಂ’ ಎಂಬ ಭಕ್ತಿಗೀತೆಗಳ ಬಿಡುಗಡೆ ಸಂದರ್ಭ ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.  ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡಬೇಕಿದೆ.

ಶ್ರೀವಿಲ್ಲಿಪುತ್ತೂರು ಆಂಡಾಳ್ ಮಾತಾ ದೇವಾಲಯವು ವಿಷ್ಣುಮೂರ್ತಿಗೆ ಸಮರ್ಪಿತವಾಗಿರುವ 108 ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು 7ನೇ ಶತಮಾನದ ಪ್ರಸಿದ್ಧ ತಮಿಳು ಕವಯಿತ್ರಿ ಆಂಡಾಳ್‌ಗೆ ಸಂಬಂಧಿಸಿದೆ. ಮಾರ್ಗಶಿರ ಮಾಸದ ಮೊದಲ ದಿನ ಪೆರುಮಾಳ್ ದೇವಸ್ಥಾನದಲ್ಲಿ ಅವಿವಾಹಿತ ಯುವತಿಯರು ವಿಶೇಷ ಪೂಜೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net