ಗುರುಕಿರಣ್ ಪತ್ನಿ ಪಲ್ಲವಿ ಶೆಟ್ಟಿಗೂ ನಟ ಸುನೀಲ್​ಗೂ ಇದೆ ಈ ಒಂದು ಸಂಬಂಧ

gurukiranpallavi
Published on

ಬೆಂಗಳೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರು ಕಿರಣ್ ಅವರು ಅನೇಕ ಕನ್ನಡ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಗುರುಕಿರಣ್​ ಅವರನ್ನು ಕನ್ನಡಿಗರಿಗೆ ಪರಿಚಯ ಮಾಡುವ ಅಗತ್ಯವಿಲ್ಲ. ಮನೆಮನೆಯಲ್ಲೂ ಚಿರಪರಿಚಿತರು ಗುರುಕಿರಣ್​. ಇವರು ಕುಟುಂಬಕ್ಕೂ ಸಿನಿಮಾ ರಂಗಕ್ಕೂ ಮೊದಲಿನಿಂದಲೂ ನಂಟು ಇದೆ. ಈ ಕುರಿತಾಗಿ ಇಂದು ನಾವು ತಿಳಿದುಕೊಳ್ಳೋಣ...ಗುರುಕಿರಣ್ ಅವರ ಪತ್ನಿ ಪಲ್ಲವಿ, ಪಲ್ಲವಿ ಯಾರು? ಅವರ ಬ್ಯಾಕ್‌ಗ್ರೌಂಡ್ ಬಗ್ಗೆ ಇಲ್ಲಿದೆ ಮಾಹಿತಿ.

ಪಲ್ಲವಿ ಉಡುಪಿ ಜಿಲ್ಲೆಯವರು ಕಾಲೇಜಿನಲ್ಲಿದ್ದಾಗ ಪಲ್ಲವಿಗೆ 'ಮಿಸ್ ಮಣಿಪಾಲ್ ಕಿರೀಟ' ಪಡೆದುಕೊಂಡಿದ್ದಾರೆ. ಪಲ್ಲವಿ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರು. ಪಲ್ಲವಿ ಅವರು ಹುಟ್ಟಿದ್ದು ಚೆನ್ನೈನಲ್ಲಿ. ಕೆಲ ವರ್ಷ ಅಸ್ಸಾಂನಲ್ಲಿ ನೆಲೆಸಿದ್ದ ಪಲ್ಲವಿಗೆ ಇಂಗ್ಲಿಷ್, ತಮಿಳು, ಅಸ್ಸಾಮಿ, ತುಳು, ಕನ್ನಡ ಮಾತನಾಡುತ್ತಾರೆ. ಗುರುಕಿರಣ್ ಮತ್ತು ಪಲ್ಲವಿ ಅವರದ್ದು ಲವ್ ಮ್ಯಾರೇಜ್ ಪಲ್ಲವಿ ಡಿಗ್ರಿ ಫೈನಲ್ ಪರೀಕ್ಷೆ ಮುಗಿದಕೂಡಲೇ ಇವರಿಬ್ಬರ ಮದುವೆ ಆಯ್ತು. ಮದುವೆಯಾಗುವಾಗ ಪಲ್ಲವಿಗೆ 20 ವರ್ಷ ಮದುವೆಯಾಗಿ 4 ವರ್ಷ ಆಗುವವರೆಗೆ ಮಂಗಳೂರಿನಲ್ಲಿದ್ದ ಪಲ್ಲವಿ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿಯವರ ಕಸಿನ್ ಬ್ರದರ್ “ಬೆಳ್ಳಿ ಕಾಲುಂಗುರ” ಚಿತ್ರ ನಟ ಸುನೀಲ್ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಪಲ್ಲವಿ, ನಟ ಸುನೀಲ್​​  ಒಟ್ಟಿಗೆ ಆಡಿ ಬೆಳದವರಾಗಿದ್ದಾರೆ. ಇಬ್ಬರು ವರಸೆಯಲ್ಲಿ ಅಣ್ಣ- ತಂಗಿ ಆಗುತ್ತಾರೆ. ಹೀಗಾಗಿ ನಟ ಸುನೀಲ್​ ಹಾಗೂ ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿ ಅವರ ಮಧ್ಯೆ ರಕ್ತ ಸಂಬಂಧವಿದೆ.

ಸ್ಯಾಂಡಲ್​ವುಡ್​​ನ ಖ್ಯಾನ ನಟ ಸುನೀಲ್​ ಅವರು ಉಡುಪಿ ಜಿಲ್ಲೆಯ ಯೇಡ್ತಡಿ ಅವರು. “ಬೆಳ್ಳಿ ಕಾಲುಂಗುರ” ಚಿತ್ರದಿಂದ ಸುನೀಲ್ ಅವರು ಬಹು ಬೇಡಿಕೆಯ ನಟರಾದರು. ಅನಂತ ನಾಗ್-ಲಕ್ಷ್ಮೀ ಜೋಡಿ ಸಿನಿಮಾ ಹೇಗೆ ಮಹಿಳೆಯರು ಇಷ್ಟ ಪಡುತ್ತಿದ್ದರೋ ಹಾಗೇ ಸುನೀಲ್-ಮಾಲಾಶ್ರೀ ಜೋಡಿಗೂ ಇಷ್ಟಪಡುತ್ತಿದ್ದರಂತೆ. 30 ವರ್ಷಗಳ ಕಾಲ ಮಾತ್ರ ಬದುಕಿದ್ದ ಇವರು 27 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಡಿಸಿದ್ದಾರೆ. 1994ರಲ್ಲಿ ನಡೆದ ಭೀಕರವಾದ ಆಕ್ಸಿಡೆಂಟ್​​ನಲ್ಲಿ ಕೊನೆಯುಸಿರೆಳೆದರು.

ಗುರುಕಿರಣ್ ಅವರ ಸಿನಿಮಾ ಕೆಲಸಕ್ಕೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೊದಲ ಬಾರಿಗೆ ಉಪೇಂದ್ರ ನಟನೆಯ 'ಎ' ಸಿನಿಮಾ ಮೂಲಕ ಗುರುಕಿರಣ್ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಗುರುಕಿರಣ್ ಸಿನಿಮಾ ಕೆಲಸಕ್ಕೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಗುರುಕಿರಣ್ ಮಂಗಳೂರಿನವರು. ಇವರ ಮಾತೃಭಾಷೆ ತುಳು. ಶಿಕ್ಷಣ ಮುಗಿಸಿ ಮಂಗಳೂರಿನ ಆರ್ಕೆಸ್ಟ್ರಾಗಳಲ್ಲಿ ಇವರು ಗಾಯಕರಾಗಿ, ಕೀಬೋರ್ಡ್ ಪೆರ್ಫಾಮರ್ ಆಗಿ ಕೆಲಸ ಮಾಡಿದ್ದರು. ಪ್ರಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಬಳಿ ಗುರುಕಿರಣ್ ಅವರು ಅಸಿಸ್ಟಂಟ್ ಆಗಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net