ಮಸ್ಕತ್‌ನಿಂದ ಬಂದು ಮತದಾನ ಮಾಡಿದ ದಂಪತಿ

7-RNR-04
Published on

ರಾಣೆಬೆನ್ನೂರ: ಇಲ್ಲಿಯ ದೊಡ್ಡಪೇಟೆಯ ಮತಗಟ್ಟೆ 64ರ ವ್ಯಾಪ್ತಿಯ ನಿವಾಸಿ ವಿಜಯಕುಮಾರ ರಾಮಾಳದ ಹಾಗೂ ಶೀಲಾ ದಂಪತಿ ಮಸ್ಕತ್‌ನಿಂದ ಬಂದು ಮತದಾನ ಮೂಲಕ ಮತದಾನದ ಪ್ರಾಮುಖ್ಯತೆ ತಿಳಿಸಿದರು.
ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಒಬ್ಬ ಅಭ್ಯರ್ಥಿ ಗೆಲುವು ಸೋಲು ಒಂದು ಮತದಿಂದ ತೀರ್ಮಾನ ಆಗಿರುವ ಉದಾಹರಣೆಗಳಿವೆ. ಎಲ್ಲದಕ್ಕಿಂತ ಮುಖ್ಯ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕಿನಿಂದ ನಾವು ದೂರವಿರಬಾರದು. ಎಲ್ಲೇ ಇದ್ದರೂ ಮತದಾನದ ದಿನದಂದು ಬಂದು ಮತ ಚಲಾಯಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net