ಅಂಗವಿಕಲ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಳು!

Suicide
Published on

ಚಿಕ್ಕಬಳ್ಳಾಪುರ: ಹೆತ್ತ ಮಗನನ್ನು ನೀರಿನ ಸಂಪಿಗೆ ಹಾಕಿ ಕೊಂದ ತಾಯಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬಾಗೇಪಲ್ಲಿ ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಸಂಭವಿಸಿದೆ.

ಕೊತ್ತೂರು ಗ್ರಾಮದ ಸುಧಾಕರ ಪತ್ನಿ ಶೋಭಾ ಮತ್ತು ಪುತ್ರ ವಿಶಾಲ್ ಮೃತರು. ವಿಶಾಲ್ ಹುಟ್ಟಿದಾಗಿನಿಂದಲೂ ಅಂಗವಿಕಲ. ನಡೆಯಲು ಆಗದೆ ಮನೆಯಲ್ಲೇ ಇರುತ್ತಿದ್ದ. ಇದನ್ನೂ ಓದಿರಿ ಕುಮುದ್ವತಿ ನದಿಯಲ್ಲಿ ಕೊಚ್ಚಿ ಹೋದ ಯುವತಿ

ಜೀವನದಲ್ಲಿ ಜಿಗುಪ್ಸೆಗೊಂಡ ಶೋಭಾ, ಅಂಗವಿಕಲ ಮಗನನ್ನು ಕೊಲೆ ಮಾಡಿದ್ದಾಳೆ. ಬಳಿಕ ಮನೆಯಲ್ಲೇ ನೇಣು ಬಿಗಿದುಕೊಂಡು ಬದುಕನ್ನು ದುರಂತ ಅಂತ್ಯವಾಗಿಸಿಕೊಂಡಿದ್ದಾಳೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net